ಕೆಆರ್ ಪೇಟೆ: 2 ಹೈಸ್ಕೂಲ್ ವಿದ್ಯಾರ್ಥಿನಿಯರು ನೇಣಿಗೆ

ಚಿಕ್ಕನಹಳ್ಳಿಯ ಶೃತಿ (13) ಹಾಗೂ ಹರೇಬೊಮ್ಮನಹಳ್ಳಿಯ ದಿವ್ಯಾ (13) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯರು. ಅರೆಬೊಪ್ಪನಹಳ್ಳಿಯ ಮಂಜೇಗೌಡರ ಪುತ್ರಿ ದಿವ್ಯಾ ಮತ್ತು ಚಿಕ್ಕೇನಹಳ್ಳಿಯ ಸಿ.ಜೆ.ಲೋಕೇಶ್ ಪುತ್ರಿ ಶೃತಿ ಅಕ್ಕ-ತಂಗಿಯರ ಮಕ್ಕಳು. ಕೆ.ಆರ್. ಪೇಟೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಈ ಕೃತ್ಯವೆಸಗಿದ್ದಾರೆ.
8ನೆ ತರಗತಿಯ ವಿದ್ಯಾರ್ಥಿನಿಯರಾದ ಇವರು ಹಾಸ್ಟೆಲ್‌ನ ಒಂದೇ ಕೊಠಡಿಯಲ್ಲಿ ವಾಸ್ತವ್ಯವಿದ್ದರೆನ್ನಲಾಗಿದೆ. ಇಂದು ಬೆಳಗ್ಗೆ ಸಹಪಾಠಿಗಳು ಇಲ್ಲದಿದ್ದಾಗ ಇವರಿಬ್ಬರೂ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.











Click it and Unblock the Notifications