ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಟದಿಂದ ಹೊರ ಬಂದ 'ವಿಜಯ' ಸಂಕೇಶ್ವರ

By Mahesh
|
Google Oneindia Kannada News

ಕನ್ನಡ ಮಾಧ್ಯಮ ಲೋಕದಲ್ಲಿನ ಸಣ್ಣ ಪುಟ್ಟ ವರ್ಗಾವಣೆ, ಗುಸು ಗುಸು ಸುದ್ದಿ ಕೂಡಾ ಈಗ ಕ್ಷಣಾರ್ಧದಲ್ಲಿ ಗಾಸಿಪ್ ಕಿವಿಗಳನ್ನು ತಲುಪಿ ಕೊನೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅಧಿಕೃತವಾಗಿ ವಿಷಯ ಹೊರ ಬೀಳುತ್ತಿದೆ. ಅಂಕಣಕಾರ ಮಣಿಕಾಂತ್ ಈಗ ಯಾವ ಸಂಸ್ಥೆ ಸೇರಿಕೊಂಡ್ರು.. ವಿಜಯ ಕರ್ನಾಟಕ ಕತೆ ಏನಾಗಿದೆ...ಸಂಕೇಶ್ವರ ಪತ್ರಿಕೆ ಸಂಕಷ್ಟಗಳು ಇಲ್ಲಿ ಓದಲು ಸಿಗುತ್ತದೆ...

ಮಣಿಕಾಂತ್ ಸುದ್ದಿ...ಪ್ರಿಯರೇ
ಕಳೆದ 12 ವರ್ಷಗಳಿಂದ ನನಗೆ ಆನ್ನ, ಆಶ್ರಯ ಮತ್ತು ಹೆಸರು ಕೊಟ್ಟದ್ದು ವಿಜಯ ಕರ್ನಾಟಕ ಪತ್ರಿಕೆ. ಈಗ ಅನಿವಾರ್ಯ ಕಾರಣಗಳಿಂದ ನಾನು ವಿಜಯ ಕರ್ನಾಟಕ ಬಿಡುತ್ತಿದ್ದೇನೆ. ಇಷ್ಟು ದಿನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನ ಬರಹಗಳನ್ನು ಮೆಚ್ಚಿದ, ತಿದ್ದಿದ ಎಲ್ಲರಿಗೂ ಕಣ್ ತುಂಬಿದ ಭಾವದೊಂದಿಗೆ ನಮಸ್ಕಾರ.

ನಾಳೆ(ಮಾ.5)ಯಿಂದ ಕನ್ನಡಪ್ರಭ ಪತ್ರಿಕೆಯೊಂದಿಗೆ ನನ್ನ ಯಾನ. ಮುಂದೆಯೂ ಎಲ್ಲರ ಶುಭ ಹಾರೈಕೆ ಇರಲಿ ಎಂಬುದು ನನ್ನ ಪ್ರೀತಿಯ ಪ್ರಾರ್ಥನೆ...

ಈ ರೀತಿ ಖ್ಯಾತ ಅಂಕಣಕಾರ ಎಆರ್ ಮಣಿಕಾಂತ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಮೆಸೇಜ್ ಹಾಕಿದ್ದಾರೆ. ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ಸಂಪಾದಕರಾಗಿದ್ದ ಕಾಲದಲ್ಲಿ ಬೆಳಕಿ ಬಂದ ಪ್ರತಿಭೆ ಮಣಿಕಾಂತ್ ..ಈಗ ಮತ್ತೆ ವಿ ಭಟ್ ಅವರ ಸಮೂಹಕ್ಕೆ ಸೇರ್ಪಡೆಯಾಗುತ್ತಿರುವುದಕ್ಕೆ ಹಲವರಿಂದ ಶುಭ ಹಾರೈಕೆ ಸಂದಿದೆ.

****
ವಿಕ ಗೆ ಹೊಸ ಸಾರಥಿ?: ಯುಗಾದಿಯ ಬಳಿಕ ವಿಜಯ ಕರ್ನಾಟಕದ ಸಾರಥ್ಯ ಹೊರಲು ಹೊಸದಿಲ್ಲಿ ಬ್ಯುರೋ ಮುಖ್ಯಸ್ಥ ಡಿ. ಉಮಾಪತಿ ಬರುತ್ತಿದ್ದಾರಂತೆ. ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಸುಭಾಷ್ ಅವರಿಗ ಮುಂಬಡ್ತಿ ನೀಡಿ ಅವರ ಸ್ಥಾನಕ್ಕೆ ಕಳಿಸಲಾಗುತ್ತಿದೆ.

ಏಪ್ರಿಲ್ ಬಳಿಕ ರಾಘವನ್ ಅವರು ಮುಂದುವರಿಯದಿರಲು ನಿರ್ಧರಿಸಿದ್ದರಂತೆ. ಆದರೆ, ಟೈಮ್ಸ್ ಗ್ರೂಫ್ ಮನವಿ ಮೇರೆಗೆ ಉಮಾಪತಿ ಅವರಿಗೆ ಮಾರ್ಗದರ್ಶಕರಾಗಿ ಪಾತ್ರ ವಹಿಸಲಿದ್ದಾರೆ. ವಸಂತ ನಾಡಿಗೇರ್, ಕರಿಸ್ವಾಮಿ, ಪ್ರಕಾಶ್, ಅಶೋಕರಾಮ್, ಜೇಪಿ ಮುಂತಾದವರ ಉಮಾಪತಿ ಅವರ ಆಗಮನದ ನಿರೀಕ್ಷೆಯಲ್ಲಿದೆ.
****
ಸಂಕಟದಿಂದ ಹೊರ ಬಂದ ಸಂಕೇಶ್ವರ:
ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ 'ವಿಜಯ ವಾಣಿ' ಎಂಬ ಹೆಸರಿನಲ್ಲೇ ಹೊರಬರಲಿದೆ. ವಿಜಯ ವಾಣಿ ಹೆಸರು ಕುರಿತಂತೆ ಎದ್ದಿದ್ದ ಗೊಂದಲ, ಗುಸುಗುಸು ಈಗ ತಣ್ಣಗಾಗಿದೆ.

ಏ.1ರ ರಾಮನವಮಿ ದಿನದಂದು ವಿಜಯ ಸಂಕೇಶ್ವರ ಅವರು ಪತ್ರಿಕೆ ಹೊರ ತರುತ್ತಿದ್ದಾರೆ ಎಂಬ ಸುದ್ದಿಯಿದೆ. ಪತ್ರಿಕೆಯ ಸಂಪಾದಕ ತಿಮ್ಮಪ್ಪ ಭಟ್ ಅವರ ಜೊತೆಗೆ ರುದ್ರಣ್ಣ ಹರ್ತಿಕೋಟೆ, ಯುವ ಸಾಹಿತಿಗಳಾದ ಶಶಿ ಸಂಪಳ್ಳಿ, ಮಂಜುನಾಥ್ ಲತಾ, ಸಿಕೆ ಮಹೇಂದ್ರ, ಹರೀಶ್ ಬಂದಗದ್ದೆ, ಶಿವಣ್ಣ, ಮುಳ್ಳೂರು ರಾಜು, ರಾಘವೇಂದ್ರ, ಕೃಷ್ಣಶೆಟ್ಟಿ ಮುಂತಾದವರು ಪತ್ರಿಕೆ ಆದಷ್ಟು ಚೆಂದಗಾಣಿಸಲು ಶ್ರಮಿಸುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದ್ರೆ,ಹುಬ್ಬಳ್ಳಿ, ಬಿಜಾಪುರ ಹಾಗೂ ಮಂಗಳೂರಿನಿಂದ ಏಕಕಾಲಕ್ಕೆ ನಾಲ್ಕು ಆವೃತ್ತಿಗಳು ಏ.1 ರಂದು ಓದುಗರ ಕೈ ಸೇರಲಿದೆ. ಸಂಕೇಶ್ವರ ಅವರ ಅಂದಿನ ವಿಜಯ ಕರ್ನಾಟಕವನ್ನು ಲೋಕಾರ್ಪಣೆ ಮಾಡಿದ್ದ ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ ಅವರು ವಿಜಯ ವಾಣಿ ಉದ್ಘಾಟನೆಗೂ ಬರುತ್ತಾರೋ ಇಲ್ಲವೋ ಸ್ಪಷ್ಟವಾಗಿಲ್ಲ.

ಆದರೆ, ಕನ್ನಡಿಗರಿಗೆ ಓದಲು ಹೊಸ ದಿನ ಪತ್ರಿಕೆಯಂತೂ ಶೀಘ್ರದಲ್ಲೇ ಸಿಗಲಿದೆ ಎಂಬುದಂತೂ ನಿಜ.

English summary
News snippets from Kannada media house. Vijay Karnataka's noted columnist Ar Manikanth is set to join Kannada Prabha. Senior Journalist Umapathi likely to become head of Vijay Karnataka. VRL's Vijyavani may be lunched on April 1 says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X