ಕರಾಳ ವಕೀಲರಿಂದ ಕೋರ್ಟ್ ಸಿಬ್ಬಂದಿ ಉಪವಾಸ

ಹೌದು, ಸಿಟಿ ಸಿವಿಲ್ ಕೋರ್ಟ್ ಸಿಬ್ಬಂದಿ ಅದರಲ್ಲೂ ಮಹಿಳಾ ಸಿಬ್ಬಂದಿ ಏನ್ಮಾಡಿದ್ದಾರೆ ಅಂದರೆ ಹಿಂದಿನ ದಿನವೇ ಅಂದರೆ ಗುರುವಾರ ಜಡ್ಜುಗಳೂ ಸೇರಿದಂತೆ ಎಲ್ಲರಿಗೂ ಶುಕ್ರವಾರ ಊಟ ತರಬೇಡಿ. ದಿನಾ ಬಾಕ್ಸ್ ಊಟ ತಿನ್ನೋದು ಇದ್ದೇ ಇರುತ್ತೆ. ಶುಕ್ರವಾರ ಲಕ್ಷಣವಾಗಿ ಇಲ್ಲೇ ಯಾವುದಾದರೂ ಹೋಟೆಲಿಗೆ ಹೋಗಿ ತಿನ್ಕೊಂಡು ಬಂದರಾಯಿತು ಅಂತ ಆಮಂತ್ರಣ ನೀಡಿದ್ದರು.
ಸರಿ, ನಮ್ಮ ಸಹೋದ್ಯೋಗಿಗಳಲ್ಲವೇ ಅಂತ ಯಾರೂ ಊಟದ ಡಬ್ಬಿ ತಂದಿಲ್ಲ. ಆದರೆ ಮಧ್ಯಾಹ್ನವಾಗುತ್ತಿದ್ದಂತೆ ಅಲ್ಲಿ ಕಂಡುಬಂದಿದ್ದೇ ಬೇರೆ. ಹೊರಗೆ ಹೆಜ್ಜೆ ಹಾಕುವುದಿರಲಿ. ಕೆಳಗಡೆ ಬಗ್ಗಿ ನೋಡೋಕ್ಕೂ ಆಗಿಲ್ಲ. ಯಾವ ದಿಕ್ಕಿನಿಂದ ಕಲ್ಲು ಬೀಸಿ ಬರುತ್ತದೋ ಅಂತ ಆತಂಕದಿಂದ ದಿನದೂಡುವಂತಾಯಿತು. ಅಲ್ಲಿಗೂ ಪುಂಡ ವಕೀಲರು ಕೋರ್ಟ್ ಒಳಗೇ ಬಂದು ದಾಂಧಲೆ ಮಾಡತೊಡಗಿದ್ದಾರೆ.
ಮಹಿಳಾ ಸಿಬ್ಬಂದಿ ಗದರಿಕೊಳ್ಳಲು ಹೋದಾಗ, 'ಏನ್ರೀ ಆವಾಜ್ ಹಾಕ್ತೀರಾ? ನೀವ್ ದಿನಾ ಅನ್ನ ತಿನ್ನೋದೆ ನಮ್ಮಿಂದ, ವಕೀಲರೇ ಇಲ್ಲದಿದ್ರೆ ನಿಮಗೆ ಕೋರ್ಟಿನಲ್ಲಿ ಕೆಲಸ ಎಲ್ಲಿರುತ್ತೆ ಅಂತ' ಮಾನಗೇಡಿ ವಕೀಲರು ರಿವರ್ಸ್ ಹೊಡೆದಿದ್ದಾರೆ.












Click it and Unblock the Notifications