ಮಾಳವಿಕಾ ಮೇಡಂ ಜೆಡಿಎಸ್ ಸೇರಿದ್ದು ಏಕೆ?

ಜೆಡಿಎಸ್ ಆಯ್ಕೆ ಮಾಡಿದ್ದು ಏಕೆ?:ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿದ್ದಾಗ ನನಗೆ ಮೂರು ಆಯ್ಕೆಗಳಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್. ಸೋನಿಯಾ ಗಾಂಧಿಯನ್ನು ನನ್ನ ನಾಯಕಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ರಿಜೆಕ್ಟ್ ಮಾಡಿದೆ. ನಾನೊಬ್ಬ ಹಿಂದೂ ಆಗಿರುವುದರಿಂದ ಬಿಜೆಪಿ ಕಡೆ ಒಲವು ತೋರಬಹುದಿತ್ತು. ಆದರೆ, ಸಂಘ ಪರಿವಾರದ ಹಿನ್ನೆಲೆಯಲ್ಲಿ ಬಿಜೆಪಿ ಸೇರಲು ಮನಸ್ಸಾಗಲಿಲ್ಲ.
ಜೆಡಿಎಸ್ ಪಕ್ಷದಲ್ಲಿ ಸಮಾಜವಾದಿ ಚಿಂತನೆ ಹಿನ್ನೆಲೆಯಿರುವುದರಿಂದ ಜೆಡಿಎಸ್ ಪಕ್ಷ ಸೇರಿದೆ. ಹಳ್ಳಿ ರೈತನ ಮಗ ದೇಶದ ಪ್ರಧಾನಿಯಾದರು ಎಂಬುದು ನಮಗೆ ಹೆಮ್ಮೆ ಸಂಗತಿ. ದೇವೇಗೌಡರ ಬಗ್ಗೆ ಅತಿಯಾದ ಗೌರವವಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಕೈಗೊಂಡ ನಿರ್ಣಯಗಳು ಮೆಚ್ಚುಗೆಯಾಗಿದೆ ಎಂದು ಮಾಳವಿಕಾ ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ ತಾರಾ, ಉಮಾಶ್ರೀ, ಇತ್ತೀಚಿನ ಪೂಜಾ ಗಾಂಧಿ ಸಾಲಿಗೆ ಮಾಳವಿಕಾ ಕೂಡಾ ಸೇರ್ಪಡೆಗೊಂಡಿದ್ದಾರೆ.











Click it and Unblock the Notifications