ಶಾಸಕ ಮುನಿರಾಜು ಆಪ್ತರು ನ್ಯಾಯಾಂಗ ಬಂಧನಕ್ಕೆ

ಗುರುವಾರ ಸಹ ಆರೋಪಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಶೇಷ ತಹಸಿಲ್ದಾರ್ ರಂಗನಾಥಯ್ಯ ಹಾಗೂ ಆರ್ ಐ ಸುರೇಶ್ ಅವರನ್ನು ಮಾ.5 ರ ತನಕ ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾ. ಸುಧೀಂದ್ರರಾವ್ ಅವರು ಗುರುವಾರ(ಮಾ.1) ಸಂಜೆ ಆದೇಶ ನೀಡಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 156(3)ನೇ ಕಲಂ ಅಡಿಯಲ್ಲಿ ಎಸ್. ಮುನಿರಾಜು ಹಾಗೂ ಉಳಿದ ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ.
ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಶಾಸಕ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚನೆ ನೀಡಿತ್ತು.
ಆದರೆ, ಶಾಸಕ ಮುನಿರಾಜು ವಿರುದ್ಧ ತನಿಖೆಗೆ ನ್ಯಾ. ಬಿವಿ ಪಿಂಟೋ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications