ಹೆಲಿಕಾಪ್ಟರ್ ಮೂಲಕ ಬೆಂಗಳೂರಿನತ್ತ ರೆಡ್ಡಿ

ಮಾರ್ಚ್ 2ರಂದು ಬೆಳಗ್ಗೆ 11 ಗಂಟೆಗೆ ರೆಡ್ಡಿಯನ್ನು ಆರ್. ಹಿತೇಂದ್ರ ಕುಮಾರ್ ನೇತೃತ್ವದ ಸಿಬಿಐ ತಂಡ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮಧ್ಯೆ, ತಮ್ಮ ನೆಚ್ಚಿನ ನಾಯಕನನ್ನು ಅನೇಕ ದಿನಗಳ ಬಳಿಕ ನೋಡಿ ಕಣ್ತುಂಬಿಸಿಕೊಳ್ಳಲು ರೆಡ್ಡಿ ಅಭಿಮಾನಿಗಳು ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದಾರೆ.
ರೆಡ್ಡಿ ಬಳಗದಿಂದ ಜಾಮೀನು ಅರ್ಜಿ ಸುರಿಮಳೆ: ಜನಾರ್ದನ ರೆಡ್ಡಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ತಮ್ಮನ್ನು ಬಂಧಿಸಬಹುದು ಎಂದು ಹಲವರು ಈಗಾಗಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರಕರಣದಲ್ಲಿ ಯಾರಿಗೂ ಜಾಮೀನು ಅರ್ಜಿ ಪ್ರಾಪ್ತಿಯಾಗಿಲ್ಲ.
ಪ್ರಕರಣದ ಸಹ ಆರೋಪಿ ಶಾಂತಾ ಲಕ್ಷ್ಮಿ ಜಯರಾಂ ಕಳೆದ ವಾರವೇ ಕರ್ನಾಟಕ ಹೈಕೋರ್ಟಿನಲ್ಲಿ ಅರ್ಜಿ ಗುಜರಾಯಿಸಿದ್ದರು. ಧಾರವಾಡ ನ್ಯಾಯಪೀಠದ ಎದುರು ಇದರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇನ್ನು, ನಾಳೆ ಶುಕ್ರವಾರ ಬೆಂಗಳೂರು ಸಿಬಿಐ ಕೋರ್ಟಿನಲ್ಲಿ ರೆಡ್ಡಿ ವಿಚಾರಣೆ ಆರಂಭವಾಗುತ್ತಿದ್ದಂತೆ ಇನ್ನಷ್ಟು ಮಂದಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ಯಾರಿಗೆಲ್ಲ ಬಂಧನದ ಭೀತಿಯಿದೆ? : ಅಸೋಸಿಯೇಟೆಡ್ ಮೈನಿಂಗ್ ಕಂಪನಿಯು (AMC) ಕರ್ನಾಟಕದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಎಫ್ಐಆರ್ ನಲ್ಲಿ ಯಾರೆಲ್ಲ ಹೆಸರುಗಳು ಕಾಣಿಸಿಕೊಂಡಿವೆ ಅಂದರೆ ...
ಲಕ್ಷ್ಮಿ ಅರುಣಾ, ಮಾಜಿ ಗಣಿ ಮಂತ್ರಿ ಶಿಡ್ಲಘಟ್ಟದ ವಿ. ಮುನಿಯಪ್ಪ ಸೇರಿದಂತೆ ಶಾಂತಾ ಲಕ್ಷ್ಮಿ ಜಯರಾಂ, AMC ಕಂಪನಿಯ ಹಿಂದಿನ ಪಾಲುದಾರರಾದ ಕೆಎಂ ಮಾರ್ವತಮ್ಮ, ಆಕೆಯ ಮಗ ಕೆಎಂ ವಿಶ್ವನಾಥ್, ಐಎಎಸ್ ಶಿವಲಿಂಗಮೂರ್ತಿ ಎಂಇ, ಐಎಫ್ಎಸ್ ಎಸ್ ಮುತ್ತಯ್ಯ, ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಮಾಲೀಕತ್ವದ ಕಂಪನಿ ಎನ್ನಲಾದ ಜನದೇವಿ ಮಿನರಲ್ಸ್, ಲಕ್ಷ್ಮಿ ಅರುಣಾ ಮಿನರಲ್ಸ್, ಕೂಡ್ಲಿಗಿ ಶಾಸಕ ಬಿ ನಾಗೇಂದ್ರ ಮಾಲೀಕತ್ವದ ಕಂಪನಿ ಎನ್ನಲಾದ ಈಗಲ್ ಟ್ರೇಡರ್ಸ್ ಲಾಜಿಸ್ಟಿಕ್ಸ್, ಬಿಆರ್ ಯೋಗೀಂದ್ರನಾಥ್ ಮೈನ್ಸ್, ಭಕ್ತ ಮಾರ್ಕಂಡೇಶ್ವರ ಮಿನರಲ್ಸ್, ದಿವಾಕರ್ ಮಿನರಲ್ಸ್, ಜಿಂಪೆಕ್ಸ್, ಬ್ರಹ್ಮಿಣಿ ಇಂಡಿಸ್ಟ್ರೀಸ್, ವಿಜಯ ಮೈನಿಂಗ್ ಇನ್ಫ್ರಾಸ್ಟ್ರಕ್ಚರ್, ಈಗಲ್ ಟ್ರೇಡರ್ಸ್, ಜೆಎಸ್ ಡಬ್ಲ್ಯು ಮತ್ತು ಇನ್ನಾ ಅನೇಕ ಸರಕಾರಿ ಅಧಿಕಾರಿಗಳು.












Click it and Unblock the Notifications