ಸತ್ಯಮೇವ ಜಯತೆ ಎಂದ ರೆಡ್ಡಿ, ನೆನಪಿನ ಗಣಿಯಿಂದ!
ಅಕ್ರಮ ಗಣಿಗಾರಿಕೆ ಕುಣಿಯಿಂದ ಖುಲಾಸೆಯಾಗಿರುವ ಯಡಿಯೂರಪ್ಪನವರು ಕೋರ್ಟಿನಿಂದ ಹೊರಬರುತ್ತಿದ್ದಂತೆ 'ಸತ್ಯಮೇವ ಜಯತೇ' ಎಂದು ಉದ್ಘರಿಸಿದರು. ಇದೇ ಮಾತನ್ನು ಜನಾರ್ದನ ರೆಡ್ಡಿಯವರೂ 2012ರಲ್ಲಿ ಹೇಳಿದ್ದರು.
ಹೈದರಾಬಾದ್, ಮಾ.1: 'ಸತ್ಯಮೇವ ಜಯತೆ' ಇದು ಚಂಚಲಗುಡ ಜೈಲಿನಿಂದ ಹೊರಬಿದ್ದ ತಕ್ಷಣ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಾಯಿಂದ ಹೊರ ಮಾತುಗಳು. ಬೆಂಗಳೂರಿನ ಸಿಬಿಐ ತಂಡದ ವಶದಲ್ಲಿರುವ ಗಾಲಿ ರೆಡ್ಡಿಯನ್ನು ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ಆರಂಭವಾಗಿದೆ.
ಈ ನಡುವೆ Prisoner on transit ಗಾಲಿ ರೆಡ್ಡಿಯನ್ನು ನೋಡಲು ಸುಮಾರು 5 ಬಸ್ ಗಳಿಂದ ಅವರ ಅಭಿಮಾನಿಗಳು ಧಾವಿಸಿದ್ದಾರೆ.
ಮಾ.2 ಮಧ್ಯಾಹ್ನ 12 ರ ಸುಮಾರಿಗೆ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ರೆಡ್ಡಿ ಹಾಗೂ ಸಹ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. [ರೆಡ್ಡಿ ಡೈಲಾಗ್ ರಿಪೀಟ್, 'ಸತ್ಯಮೇವ ಜಯತೆ' ಎಂದ ಯಡಿಯೂರಪ್ಪ]

ಸಿಬಿಐ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ರೆಡ್ಡಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ. ವಿಶೇಷ ನ್ಯಾಯಾಲಯ ಅನುಮತಿ ನೀಡಿದರೆ ಗಾಲಿ ರೆಡ್ಡಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿ ಕೊಡುವುದು ಖಾತ್ರಿ ಎನ್ನಬಹುದು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ತಂಡಕ್ಕೆ ರೆಡ್ಡಿ ಅವರನ್ನು ಬಳ್ಳಾರಿಗೆ ಕರೆದೊಯ್ಯಲು ಯೋಜಿಸಿದ್ದು, ಇದಕ್ಕಾಗಿ ಕೋರ್ಟ್ ಅನುಮತಿ ಕೋರಲಿದ್ದಾರೆ.












Click it and Unblock the Notifications