ಕೋರ್ ಕಮಿಟಿ ಸಭೆಗೆ ಯಡಿಯೂರಪ್ಪ ಬಹಿಷ್ಕಾರ

ದಿಲ್ಲಿಯಲ್ಲಿ ಸಭೆ ಎಲ್ಲಿ, ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಸಭೆ ನಿಗದಿಯಾಗ ಬಳಿಕ ಅದರಲ್ಲಿ ಪಾಲ್ಗೊಳ್ಳಬೇಕೋ, ಬೇಡವೋ ಎಂಬುದರ ಬಗ್ಗೆ ನಿರ್ಧರಿಸುವುದಾಗಿ ಯಡಿಯೂರಪ್ಪ ಜಾರಿಕೆಯ ಉತ್ತರ ನೀಡಿದ್ದಾರೆ.
ಅದಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಯಲ್ಲಿ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ ಮುಂತಾದ ಅತ್ಯಾಪ್ತ ಸಚಿವರು, ಶಾಸಕರೊಂದಿಗೆ ಸಭೆ ಸೇರಿದ ಬಳಿಕ ಯಡಿಯೂರಪ್ಪ ತಮ್ಮ ಈ ನಿರ್ಧಾರ ಪ್ರಕಟಿಸಿದ್ದಾರೆ.
ಇದಕ್ಕೆ ಅವರು ಕೊಟ್ಟಿರುವ ಕಾರಣ ಅನಾರೋಗ್ಯ. ಆದರೆ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಸಿಎಂ ಸ್ಥಾನಕ್ಕಾಗಿ ಯಡಿಯೂರಪ್ಪ ತಮ್ಮ ಮೊಂಡಾಟ ಮುಂದುವರಿಸಿದ್ದು, ಮತ್ತೊಂದು ಜಗನ್ನಾಟಕಕ್ಕೆ ಅಣಿಯಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕಳೆದ ವಾರ ಚಿಂತನ ಮಂಥನಕ್ಕಾಗಿ ಬೆಂಗಳೂರಿಗೆ ಬಂದು ಯಡಿಯೂರಪ್ಪನವರ ಕಿವಿಹಿಂಡಿದ್ದ ಪಕ್ಷದ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ, ಮಾರ್ಚ್ 3ರಂದು ದಿಲ್ಲಿಗೆ ಬನ್ನಿ, ಅಲ್ಲಿ ಡೀಟೇಲಾಗಿ ಮಾತನಾಡೋಣವೆಂದು ಯಡಿಯೂರಪ್ಪಗೆ ಭರವಸೆ ನೀಡಿದ್ದರು. ಯಡಿಯೂರಪ್ಪ ನಿರ್ಧಾರದಿಂದ ಈಗ ಸಭೆ ನಡೆಯುವುದು ಅನುಮಾನವಾಗಿದೆ.












Click it and Unblock the Notifications