ವಿಶ್ವ ಸರಣಿ ಹಾಕಿಗೆ ಕರ್ನಾಟಕ ಲಯನ್ಸ್ ಸಜ್ಜು

Bhopal Badshahs vs Chandigarh Comets
ಚಂದೀಗಢ, ಮಾ.1: ವಿಶ್ವ ಸರಣಿ ಹಾಕಿ(WSH) ಗೆ ಭರ್ಜರಿ ಆರಂಭ ದೊರೆಕಿದೆ. ಭೋಪಾಲ್ ಬಾದ್ ಷಹಗಳು ಹಾಗೂ ಚಂದೀಗಢ ಕಾಮೇಟ್ಸ್ ವಿರುದ್ಧ ಪಂದ್ಯ ಪ್ರೇಕ್ಷಕರನ್ನು ರಂಜಿಸಿದೆ. ಮೊದಲ ಪಂದ್ಯದಲ್ಲಿ ಭೋಪಾಲ್ 4-3 ಅಂತರದಿಂದ ಜಯಭೇರಿ ಬಾರಿಸಿದೆ.

ನಗರ ಕೇಂದ್ರಿತ ಹಾಕಿ ಲೀಗ್ World Series Hockey (WSH) ಗೆ ಜನರಿಗೆ ಕಿಚ್ಚು ಹಬ್ಬಿಸುತ್ತಿದೆ. ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿದೆ. ಲೀಗ್ ಹಂತದ ಪಂದ್ಯಗಳ ನಂತರ ಟಾಪ್ ನಾಲ್ಕು ತಂಡಗಳು ಉಪಾಂತ್ಯ ಹಾಗೂ ಅಂತಿಮ ಹಣಾಹಣಿಯಲ್ಲಿ ಕಾದಾಡಲಿದೆ.

ಏ.1 ರಂದು ಸೆಮಿ ಫೈನಲ್ ಹಾಗೂ ಏ.2 ರಂದು ಫೈನಲ್ ಪಂದ್ಯ ಜರುಗಲಿದೆ. ಬೆಂಗಳೂರು, ಚಂದೀಗಢ, ಮುಂಬೈ, ದೆಹಲಿ, ಭೋಪಾಲ್, ಚೆನ್ನೈ, ಪುಣೆ ಹಾಗೂ ಜಲಂಧರ್ ನಲ್ಲಿ ಪಂದ್ಯಗಳು ನಡೆಯಲಿದೆ.

ಇಂಡಿಯನ್ ಹಾಕಿ ಫೆಡರೇಷನ್(IHF) ಹಾಗೂ ನಿಂಬಸ್ ಸ್ಫೋರ್ಟ್ ಸಹಯೋಗದಲ್ಲಿ ಈ ಟೂರ್ನಮೆಂಟ್ ಆಯೋಜಿಸಲಾಗಿದೆ. ಮಂಗಳೂರು ಮೂಲದ ನಟ ಸುನಿಲ್ ಶೆಟ್ಟಿ ಅವರು ಕರ್ನಾಟಕ ಲಯನ್ಸ್ ತಂಡದ ಒಡೆಯರಾಗಿದ್ದಾರೆ.

ತಂಡಗಳು ಇಂತಿದೆ:
1. ಭೋಪಾಲ್ ಬಾದಷಹ
2. ಚಂದೀಗಢ ಕಾಮೆಟ್ಸ್
3. ಚೆನ್ನೈ ಚೀತಾಸ್
4. ದೆಹಲಿ ವಿಜಾರ್ಡ್ಸ್
5. ಕರ್ನಾಟಕ ಲಯನ್ಸ್
6. ಮುಂಬೈ ಮರೈನ್ಸ್
7. ಪುಣೆ ಸ್ಟ್ರೈಕರ್ಸ್
8. ಷೇರ್ ಎ ಪಂಜಾಬ್

ಫೆ. 29: ಭೋಪಾಲ್(4)-ಚಂದೀಗಢ(3)
ಮಾ. 1: 7 ಗಂಟೆಗೆ ಷೇರ್ ಎ ಪಂಜಾಬ್ vs ಚೆನ್ನೈ ಚೀತಾಸ್ (ಜಲಂಧರ್)
9 ಗಂಟೆಗೆ ಮುಂಬೈ ಮರೈನ್ಸ್ vs ಪುಣೆ ಸ್ಟ್ರೈಕರ್ಸ್ (ಮುಂಬೈ)

ಮಾ.2: ಕರ್ನಾಟಕ ಲಯನ್ಸ್ vs ದೆಹಲಿ ವಿಜಾರ್ಡ್ಸ್(ದೆಹಲಿ)
ಮುಂಬೈ ಮರೈನ್ಸ್ vs ಭೋಪಾಲ್ ಬಾದ್ ಷಹ(ಮುಂಬೈ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+