ಜನಾರ್ದನ ರೆಡ್ಡಿಯತ್ತ ಅನುಕಂಪದ ಅಲೆ!

ಇವೇ ಧಾಟಿಯ ಪ್ರಶ್ನೆಗಳು ಈಗ ಬೆಂಗಳೂರಿನಲ್ಲಿ ಎಲ್ಲೆಡೆ ಕೇಳಿಬರುತ್ತಿದವೆ. ಇದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋ ಏಳೋ ತಿಂಗಳಿಂದ ಜೈಲು ಸೇರಿರುವ ಜನಾರ್ದನ ರೆಡ್ಡಿ ಬಗ್ಗೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ಜನಾ ರೆಡ್ಡಿ ಕರ್ನಾಟಕ ಸಿಬಿಐ ವಿಚಾರಣೆಗಾಗಿ ಇನ್ನೇನು ಬೆಂಗಳೂರಿಗೆ ಬಂದಿಳಿಯುತ್ತಿರುವ ಸಂದರ್ಭದಲ್ಲಿ ಎಲ್ಲೆಲ್ಲೂ ಇಂತಹ ಪ್ರಶ್ನೆಗಳೇ ಕೇಳಿಬರುತ್ತಿವೆ.
ನಾಡಿನ ಮಾಜಿ ಸಿಎಂ ಜೈಲು ಸೇರಿದ 24 ದಿನಗಳಲ್ಲೇ ಸ್ವತಂತ್ರ ಹಕ್ಕಿಯಾದರು. ಆದರೆ ರೆಡ್ಡಿಗೆ ಏಕೆ ಇಂಥ ಶಿಕ್ಷೆ. ಆ ಮಾಜಿ ಸಿಎಮ್ಮೂ, ಇವರೂ ಒಂದೇ ಪಕ್ಷದೋರು. ಆವಾಗ ಇಯಪ್ಪ ಜೈಲು ಸೇರಿದಾಗ ಏನೆಲ್ಲ ನಾಟಕುಗಳು ನಡೆದೋದವು.
ಜೈಲಿಗೇ ಹೋಗೊಲ್ಲ ಅಂತ ಮೊಂಡಾಟವಾಡಿ ಆಸ್ಪತ್ರೆ ಸೇರಿಕೊಂಡಿದ್ದ ಪುಣ್ಯಾತ್ಮ ಕೋರ್ಟಿಗೆ ಹೆದರಿ ಜೈಲು ಸೇರಿಕೊಂಡ. ಆದರೆ ಇಯಪ್ಪ ರೆಡ್ಡಿ ಮಾತ್ರ ಯಾವತ್ತೂ ಎದೆಹಿಡಿದುಕೊಂಡು ನಾಟಕವಾಡಲಿಲ್ಲ.
ಇನ್ನು, ಮತ್ತೊಬ್ಬ ಮಂತ್ರಿ ತನ್ನ ಸುಪುತ್ರನೊಂದಿಗೆ ಜೈಲು ಸೇರಿಕೊಂಡಿದ್ದ. ಆದರೆ ಜಗನ್ನಾಟಕವಾಡಿ ಕೊನೆಗೆ ಕ್ಯಾನ್ಸರ್ ಇದೆ ಅಂತ ಸೀದಾ ವಿದೇಶಕ್ಕೇ ಹಾರಿಬಿಟ್ಟ. ಆದರೆ ಏನು ಬಂತು. ಕೋರ್ಟಿಗೇ ಮಂಕುಬೂದಿ ಎರಚಿದವ ಈಗ ಎಲ್ಲೆಂದರಲ್ಲಿ ರಾಜಾರೋಶವಾಗಿ ಓಡಾಡಿಕೊಂಡಿದ್ದಾನೆ. ಅಂತದ್ದರಲ್ಲಿ ನಮ್ ರೆಡ್ಡಿ ಏನ್ ಮಾಡವ್ರೆ?
ಇನ್ನು, ಸಾಕ್ಷಾತ್ ಸಿಎಮ್ಮು ಸಾಹೇಬರೇ ಜಯದೇವ ಆಸ್ಪತ್ರೆಯಲ್ಲಿದ್ದ ಜೈಲುಕೈದಿಯನ್ನು ನೋಡಿಕೊಂಡು ಬಂದ್ಬಿಟ್ರು. ಜತೆಗೆ ಇಡೀ ಸಂಪುಟ (ಅವರ ಪರಮಾಪ್ತ ಸಚಿವೆಯನ್ನು ಬಿಟ್ಟು) ಜಯದೇವ ಆಸ್ಪತ್ರೆಯಲ್ಲಿ ಭಾನುವಾರದ ಪಿಕ್ನಿಕ್ ಅನುಭವಿಸಿತು.
ಹಾಗಾದ್ರೆ ಇದೀಗ ಆ ಮಾಜಿ ಸಿಎಮ್ಮು, ಹಾಲಿ ಸಿಎಮ್ಮು ಎಲ್ಲ ಹೋಗಿ ನಮ್ ಜನಾರ್ದನ ರೆಡ್ಡಿಯವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನೋಡಿಕೊಂಡು ಬರುತ್ತಾರಾ? ಎಂದು ಜನ ಅಮಾಯಕವಾಗಿ ಕೇಳತೊಡಗಿದ್ದಾರೆ. ಒಟ್ಟಿನಲ್ಲಿ ಜನಾರ್ದನ ರೆಡ್ಡಿ ಪರ ಭರ್ಜರಿ ಅನುಕಂಪದ ಅಲೆ ಎದ್ದಿರುವುದಂತೂ ನಿಜ.












Click it and Unblock the Notifications