ಹಸುಗೂಸಿನ ಮುಂದೆ ನೇಣಿಗೆ ಶರಣಾದ ಚಾಲಕ

Auto Driver Suicide Katriguppe
ಬೆಂಗಳೂರು, ಮಾ.1: ದಿನನಿತ್ಯ ಕುಡಿದುಕೊಂಡು ಬಂದು ಮನೆಯಲ್ಲಿ ನಿತ್ಯ ಜಗಳವಾಡುತ್ತಿದ್ದ ಆಟೋ ಡ್ರೈವರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕತ್ರಿಗುಪ್ಪೆ ಕಾವೇರಿ ನಗರದ ಆಟೋ ಚಾಲಕ ಪ್ರವೀಣ್ ಕುಮಾರ್(30) ಎಂದಿನಂತೆ ಬುಧವಾರ ರಾತ್ರಿ ಕೂಡಾ ಕುಡಿದು ಬಂದಿದ್ದ. ಇದರಿಂದ ಬೇಸರಗೊಂಡ ಆತನ ಪತ್ನಿ ಪ್ರವೀಣ್ ಜೊತೆ ಜಗಳವಾಡಿದ್ದಾಳೆ. ಸಿಟ್ಟಿನಲ್ಲಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ.

ನಂತರ ಒಂದೂವರೆ ವರ್ಷದ ಮಗು ಧನರಾಜ್ ಎದುರಲ್ಲಿ ಫ್ಯಾನಿಗೆ ನೇಣು ಬಿಗಿದು ಸಾವನ್ನಪ್ಪಿದ್ದಾನೆ. ಅಕ್ಕಪಕ್ಕದ ಮನೆಯವರಿಗೆ ಪ್ರವೀಣ್ ಸಾವನ್ನಪ್ಪಿರುವ ಸುದ್ದಿ ಬೆಳಗ್ಗೆ ತಿಳಿದಿದೆ.

ಅಪ್ಪನ ಸಾವನ್ನು ಕಣ್ಣಾರೆ ಕಂಡ ಹಸುಗೂಸು ಅತ್ತು ಅತ್ತು ಸುಸ್ತಾಗಿ ಮಲಗಿಬಿಟ್ಟಿದೆ. ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಾಗಿದೆ. ಪ್ರವೀಣ್ ಪತ್ನಿ ತನ್ನ ತವರಿಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+