ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಜೋಡಿ ಬಳಿ ಕೇವಲ 240 ಕೋಟಿ ಆಸ್ತಿ

By Srinath
|
Google Oneindia Kannada News

ias-couple-in-mp-amassed-rs-240-cr-illegal-assets
ಭೋಪಾಲ, ಫೆ.28: ಮಧ್ಯಪ್ರದೇಶದ ಅರವಿಂದ ಜೋಶಿ ಮತ್ತು ಟೀನು ಜೋಶಿ ಐಎಎಸ್ ದಂಪತಿ ಗುಡ್ಡೆ ಹಾಕಿರುವುದು ಕೇವಲ 240 ಕೋಟಿ ರು. ಅಕ್ರಮ ಆಸ್ತಿ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಈ ಜೋಶಿ ಜೋಡಿ ಅಧಿಕೃತ ನಿವಾಸದ ಮೇಲೆ 2010ರ ಡಿಸೆಂಬರ್ 10ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಇದೀಗ ಕಳಂಕಿತ ಜೋಶಿ ಜೋಡಿಯ ಅಕ್ರಮ ಆಸ್ತಿ 240 ಕೋಟಿ ರೂ. ಎಂದು ಐಟಿ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಇದು ಲೋಕಾಯುಕ್ತ ಪೊಲೀಸರಿಗೆ

ಸುಮಾರು 2,500 ಪುಟಗಳ ವರದಿ ಸಲ್ಲಿಸಿರುವ ಐಟಿ ಇಲಾಖೆಯು ದಂಪತಿ ಆಸ್ತಿಯನ್ನು ಹೀಗೆ ಪಟ್ಟಿ ಮಾಡಿದೆ. ಅಸ್ಸಾಂನಲ್ಲಿ 18 ಕೋಟಿ ರು. ಮೌಲ್ಯದ 18 ಫ್ಲಾಟುಗಳು, ಮಧ್ಯಪ್ರದೇಶದಲ್ಲಿ 193 ಕೋಟಿ ರು. ಮೌಲ್ಯದ 387 ಎಕರೆ ಜಮೀನು, ಮಧ್ಯಪ್ರದೇಶ ಮತ್ತು ದಿಲ್ಲಿಯಲ್ಲಿ ಕೋಟ್ಯಂತರ ರು. ಮೌಲ್ಯದ ಫ್ಲಾಟುಗಳು, ಐಸಿಐಸಿಐ ಬ್ಯಾಂಕಿನಲ್ಲಿ 6 ಕೋಟಿ ರು. ಮೌಲ್ಯದ ಷೇರು, ಜತೆಗೆ 15 ಕೋಟಿ ರು. ಬಂಡವಾಳ ಹೂಡಿಕೆ. ಇನ್ನೂ, ಇನ್ನೂ ...

ಅಂದಹಾಗೆ ಜೋಶಿ ಜೋಡಿ 1970ರ ಮಧ್ಯಪ್ರದೇಶ ಐಎಎಸ್ ಕೇಡರ್ ನವರು. 1999ರ ಕಾರ್ಗಿಲ್ ಯುದ್ಧದ ವೇಳೆ ಈ ಅರವಿಂದ ಜೋಶಿ ಪುಣ್ಮಾತ್ಮ ರಕ್ಷಣಾ ಸಚಿವಾಲಯದಲ್ಲಿದ್ದರೆ ಆತನ ಪತ್ನಿ ಟೀನು ಮಾರಾಯ್ತಿ ಪ್ರಧಾನಿ ಕಚೇರಿ ಕೆಲ ಕಾಲ ಕೆಲಸ ಮಾಡಿದ್ದರು.

English summary
The total wealth amassed by the tainted IAS couple Arvind Joshi and Tinu Joshi is pegged at Rs 240.38 crore. The Special Police Establishment (SPE) of the Lokayukta had carried out a raid at the couple's home on December 10, 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X