ಠುಸ್ಸೆಂದ 'ಬರ್ತ್ ಡೆ ಬಾಯ್' ಯಡಿಯೂರಪ್ಪ ಬಾಂಬ್

'ಬರ್ತ್ ಡೆ ಬಾಯ್' ಯಡಿಯೂರಪ್ಪನವರು ಇಂದು ಬೆಳಗ್ಗೆ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಡಾ. ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದವರೇ, 'ಭಿನ್ನ' ರಾಗ ಬದಲಿಸಿದ್ದಾರೆ. 'ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಯಾವುದೇ ಧಕ್ಕೆಯಿಲ್ಲ. 5 ವರ್ಷ ಅವಧಿಯನ್ನು ಪೂರೈಸಲಿದೆ. ಸದಾನಂದ ಗೌಡರೇ ಭಾರಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ' ಎನ್ನುವ ಮೂಲಕ ಇಡೀ ರಾಜ್ಯವನ್ನು ಅಚ್ಚರಿಯ ಮಡುವಿಗೆ ತಳ್ಳಿದ್ದಾರೆ.
ಅಲ್ಲಿಗೆ, ಬಿಜೆಪಿಯಲ್ಲೇ ಉಳಿದುಕೊಂಡು ಸ್ಥಾನಮಾನಕ್ಕಾಗಿ ಹೋರಾಟ ನಡೆಸಬೇಕೆಂಬ ಸಲಹೆಗಳನ್ನು ನೀಡಿರುವ ಬೆಂಬಲಿಗ ಸಚಿವರು ಮತ್ತು ಶಾಸಕರು ತರಾತುರಿಯ ನಿರ್ಧಾರ ಕೈಗೊಳ್ಳದಂತೆ ಯಡಿಯೂರಪ್ಪನವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೌಡರದೂ U ಟರ್ನ್: ಗಮನಾರ್ಹವೆಂದರೆ, ಅತ್ತ ಸಿಎಂ ಸದಾನಂದ ಗೌಡರೂ ಸಹ U ಟರ್ನ್ ತೆಗೆದುಕೊಂಡಿದ್ದು, ಯಡಿಯೂರಪ್ಪ ಅವರನ್ನು ಸಿಕ್ಕಾಪಟ್ಟೆ ಹೊಗಳಿಟ್ಟಿದ್ದಾರೆ. ಆಚಾರ್ಯರ ಮಾರ್ಗದರ್ಶನದ ಅನುಪಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನೇ ಮಾದರಿಯಾಗಿಸಿಕೊಂಡು, ಅವರು ಹೇಳಿದಂತೆ ಬಜೆಟ್ ಮಂಡಿಸುವೆ ಎಂದಿದ್ದಾರೆ.
ಯಡಿಯೂರಪ್ಪನವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡುತ್ತೇನೆ. ಶುಭಾಶಯ ಕೋರಿ ಮುಂದಿನ ಭವಿಷ್ಯ ಇನ್ನಷ್ಟು ಯಶಸ್ವಿಯಾಗಲಿ ಎಂಬುದಾಗಿ ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಮಂಗಳೂರಿನಲ್ಲಿ ಹೇಳಿದ್ದಾರೆ.












Click it and Unblock the Notifications