ಬಿಜೆಪಿ ಕಪ್ಪು ಹಣ ತರಲಿಲ್ಲ ಏಕೆ: ಖಡಕ್ ಪ್ರಶ್ನೆ

why-bjp-failed-bring-back-black-money-sonia
ಪಣಜಿ,ಫೆ.27: ಸ್ವಿಸ್ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪುಹಣ ವಾಪಸ್‌ ತರಲು ಕಾಂಗ್ರೆಸ್ ನೃತೃತ್ವದ ಯುಪಿಎ ಸರಕಾರ ವಿಫ‌ಲವಾಗಿದೆ ಎಂದು ಬಿಜೆಪಿ ಬೊಬ್ಬಿಡುತ್ತಿದೆ. ಆದರೆ ಇದೇ ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿರುವಾಗ ಅದನ್ನು ವಾಪಸ್ಸು ತರಲು ಏಕೆ ಮನಸು ಮಾಡಲಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಖಡಕ್ಕಾಗಿ ಕೇಳಿದ್ದಾರೆ.

ಬಿಜೆಪಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿದೆ. ವಿದೇಶಗಳಲ್ಲಿ ಕಪ್ಪುಹಣ ಜಮೆಯಾಗಿದ್ದರೆ ಅದನ್ನು ವಾಪಸ್‌ ತರಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆಯಿದ್ದಾಗ ಕಪ್ಪುಹಣ ಏಕೆ ವಾಪಸ್‌ ಬರಲಿಲ್ಲ ಎಂದು ಗೋವಾ ಚುನಾವಣಾ ಸಭೆಯಲ್ಲಿ ಸೋನಿಯಾ ಪ್ರಶ್ನಿಸಿದ್ದಾರೆ.

ಬರೋಬ್ಬರಿ ಆರು ವರ್ಷ ಅಧಿಕಾರದಲ್ಲಿದ್ದಾಗ ನೀವೇನು ಮಾಡಿದ್ದೀರಿ ಎನ್ನುವ ಪ್ರಶ್ನೆಯನ್ನು ಬಿಜೆಪಿಗೆ ಕೇಳುತ್ತಿದ್ದೇನೆ. ಎಲ್ ಕೆ ಆಡ್ವಾಣಿ ಆಗ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು. ‌ಕಪ್ಪುಹಣ ವಾಪಸ್‌ ತರುವ ನಿಟ್ಟಿನಲ್ಲಿ ಅವರೇನು ಮಾಡಿದ್ದಾರೆ ಎಂದು ಮಾರ್ಮಿಕವಾಗಿ ಕಳಿದ್ದಾರೆ.

ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರ ನಿರ್ಮೂಲನೆಗೆ ಬಹಳ ದೃಢ ಪ್ರಯತ್ನಗಳನ್ನು ಮಾಡಿದೆ. ಇದು ಕಾಂಗ್ರೆಸ್‌ ಸರಕಾರ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ. ಲೋಕಸಭೆಯಲ್ಲಿ ಲೋಕಪಾಲ ಮಸೂದೆಯನ್ನು ನಾವು ಮಂಜೂರು ಮಾಡಿಕೊಂಡೆವು. ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಇತರ ಕೆಲವು ಪಕ್ಷಗಳು ಮಸೂದೆ ಮಂಜೂರಾಗದಂತೆ ತಡೆಯೊಡ್ಡಿವೆ. ಬಿಜೆಪಿ ನಾಯಕರು ಆಷಾಢಭೂತಿಗಳು ಎಂದೂ ಸೋನಿಯಾ ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+