• search
For Quick Alerts
ALLOW NOTIFICATIONS  
For Daily Alerts

  ಜಯನಗರ ಇನ್ಸ್‌ಪೆಕ್ಟರ್ ಉಮೇಶ್ ತುರ್ತು ಗಮನಕ್ಕೆ

  By * ಶಂಭೋ ಶಂಕರ, ಬಸವನಗುಡಿ
  |

  ಬೆಂಗಳೂರು, ಫೆ. 27: ಬೆಂಗಳೂರು ಪೊಲೀಸ್ ತಂಡ ಮೊನ್ನೆ ಬೀದರಿನ ಇರಾನಿ ಕಾಲೊನಿಗೆ ನುಗ್ಗಿ 20-30 ಪಾತಕಿಗಳನ್ನು ಎತ್ಹಾಕಿಕೊಂಡು ಬಂದಿರುವುದು ಬೆಂಗಳೂರಿಗರ ಮಟ್ಟಿಗೆ ನೆಮ್ಮದಿಯ ವಿಚಾರ. ಈ ಪೊಲೀಸ್ ತಂಡದಲ್ಲಿ ಜಯನಗರದ ಹಾಲಿ ಇನ್ಸ್‌ಪೆಕ್ಟರ್ ಎಸ್.ಕೆ. ಉಮೇಶ್ ಸಹ ಇದ್ದರು ಎಂಬುದು ಜಯನಗರ ಮತ್ತು ಜೆಪಿ ನಗರವಾಸಿಗಳಿಗೆ ಹೆಮ್ಮೆಯ ವಿಚಾರ. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಉಮೇಶ್ ಅವರಿಗೆ ಈ ಖಾಸಾ ಪತ್ರ...

  ಸರ್, ಇರಾನಿ ಮೂಲದ ಈ ಖತರನಾಕ್ ಪಾತಕಿಗಳನ್ನು ಹೆಡೆಮುರಿಗೆ ಕಟ್ಟಿ ತರುವುದಕ್ಕೆ ಕಾರಣವಾಗಿದ್ದು... ನೀವು ಜೆಪಿ ನಗರದ ಇನ್ಸ್‌ಪೆಕ್ಟರ್ ಆಗಿದ್ದಾಗ 10 ಪಾತಕಿಗಳ ತಂಡವೊಂದನ್ನು ಹಿಡಿದು, ಅವರನ್ನೆಲ್ಲ ತದುಕಿದಾಗ, ಅವರು ಬಾಯ್ಬಿಟ್ಟ ಮಾಹಿತಿ ಎಂಬುದು ಶ್ಲಾಘನೀಯ.

  Jayanagar police inspector SK Umesh can you help elder man

  ಆದರೆ ಅದೇ ಆಸುಪಾಸಿನಲ್ಲಿ ಮತ್ತು ಅದಕ್ಕೂ ಮುನ್ನ ಅಂದರೆ ನೀವು ಜೆಪಿ ನಗರದ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ, ಇದೇ ಠಾಣಾ ವ್ಯಾಪ್ತಿಯಲ್ಲಿ ಇದೇ ಪಾತಕಿಗಳು ಇಂತಹ ಹಲವಾರು ಕುಕೃತ್ಯಗಳನ್ನು ನಡೆಸಿದ್ದರು. ಇದರಿಂದ ಮಹಿಳೆಯರು ಹೊಸಿಲು ದಾಟಿ ಬಾರದಂತೆ ಆತಂಕ ಸೃಷ್ಟಿಸಿದ್ದರು ಈ ಪಾತಕಿಗಳು.

  ಅಲ್ಲಿಗೂ ತಮ್ಮ ಪಾಡಿಗೆ ತಾವು ಮನೆಗಳಲ್ಲೇ ಇದ್ದರೂ ಒಂಟಿ ಮಹಿಳೆಯರಿರುವ ಮನೆಗಳನ್ನು ಮೊದಲೆ ಪತ್ತೆ ಹಚ್ಚಿಕೊಂಡು ಪೂರ್ವಯೋಜಿತ ಸಂಚಿನಂತೆ ಆ ಮನೆಗಳಿಗೆ ಪಾತಕಿಗಳು ನುಗ್ಗುತ್ತಿದ್ದರು. ಮನೆಯೊಳಗೆ ಕಳ್ಳಹೆಜ್ಜೆ ಹಾಕುತ್ತಿದ್ದಂತೆ ಮನೆಯೊಡತಿಗೆ ಸಾಷ್ಟಾಂಗ ನಮಸ್ಕಾರ ಹಾಕಿ 'ನೀವು ತುಂಬಾ ಒಳ್ಳೆಯ ಜನ. ದೇವರು ಇದ್ದ ಹಾಗೆ. ನಾವು ಹೊಸ ವ್ಯಾಪಾರ ಮಾಡಬೇಕು ಅಂತಿದ್ದೀವಿ. ಆದ್ದರಿಂದ ಹಿರಿಯರಾದ ನೀವು ಈ ನೋಟನ್ನು ಮುಟ್ಟಿಕೊಡಿ' ಎಂದು 500 ರೂಪಾಯಿ ನೋಟೊಂದನ್ನು ಅವರ ಕೈಯಲ್ಲಿ ಇಡುತ್ತಿದ್ದರು.

  ಇವರ ಮಂಕುಬೂದಿಗೆ ಚಿತ್ತಾಗುತ್ತಿದ್ದ ಆ ಹಿರಿಯ ಮಹಿಳೆಯರು ಅಮಾಯಕವಾಗಿ ಇವರ ನಾಟಕಕ್ಕೆ ಮರುಳಾಗುತ್ತಿದ್ದರು. ನಂತರ ಆ ನೋಟನ್ನು ದೇವರ ಮುಂದೆ ಇಟ್ಟುಕೊಡಿ ಎಂದು ಕೇಳುತ್ತಿದ್ದರು. ಈ ಮಧ್ಯೆ, ಯಾವುದೋ ಮಾಯದಲ್ಲಿ ಆ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಅವರ ಅರಿವಿಗೆ ಬಾರದಂತೆ ಎಗರಿಸಿ ಬಿಡುತ್ತಿದ್ದರು. ಇದೆಲ್ಲ ಐದಾರು ನಿಮಿಷದ ಕಾರ್ಯಾಚರಣೆ ಅಷ್ಟೆ. ಆ ಪಾತಕಿಗಳು ಮನೆಯಿಂದ ಹೊರಬಿದ್ದ 10-15 ನಿಮಿಷಕ್ಕೆ ಆ ಮಹಿಳೆ ವಾಸ್ತವಕ್ಕೆ ಮರಳಿದಾಗ ತಾನು ಎಂತಹ ಮರಾಮೋಸಕ್ಕೆ ತುತ್ತಾದೆ ಎಂಬುದು ಅವರ ಗಮನಕ್ಕೆ ಬರುತ್ತಿತ್ತು.

  Exactly ಇಂತಹ ಒಂದು ಪ್ರಕರಣವನ್ನು ನಿಮ್ಮ ಗಮನಕ್ಕೆ ತರುವ ಸಲುವಾಗಿ ಇದನ್ನು ಬರೆಯುತ್ತಿದ್ದೇನೆ. ಇದು ನಡೆದಿದ್ದು ಎಲ್ಲೋ ದೂರದಲ್ಲಿ ಅಲ್ಲ. ಜೆಪಿ ನಗರದಲ್ಲಿ ನಿಮ್ಮ ಮನೆಯ ಎಡ ಭಾಗದಲ್ಲಿರುವ ವೃದ್ಧ ಜೋಡಿಯ ಮನೆಯಲ್ಲಿ, ಸುಮಾರು ಮೂರು ವರ್ಷಗಳ ಹಿಂದೆ ಇಂತಹ ಕುಕೃತ್ಯ ನಡೆದಿತ್ತು. ಆ ಬಗ್ಗೆ ನಿಮ್ಮ ಹಿಂದಿನ ಇನ್ಸ್‌ಪೆಕ್ಟರ್ ಗೆ ದೂರು ಸಹ ನೀಡಲಾಗಿತ್ತು. ಸಾಕ್ಷಾತ್ ಡಿಸಿಪಿ ಸಾಹೇಬರೇ ಅಂದು ಆ ಮನೆಗೆ ಧಾವಿಸಿ, ವೃದ್ಧ ದಂಪತಿಗೆ ಧೈರ್ಯ ಹೇಳಿ ಹೋಗಿದ್ದರು. ಆದರೆ ಜೆಪಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಅದನ್ನು ಅಷ್ಟಕ್ಕೇ ಮರೆತು ಹೋದರು. ಆದರೆ ಇತ್ತ ಆ ನಿಷ್ಪಾಪಿ ಹಿರಿಯ ಮಹಿಳೆ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ಆಘಾತದಿಂದಲ್ಲಿ ಚೇತರಿಸಿಕೊಳ್ಳಲಾಗದೆ (ಪಾತಕಿಗಳು ಎಸಗುವ ಕುಕೃತ್ಯ ಎಂಥ ಪರಿಣಾಮ ಬೀರುತ್ತದೋ ನೋಡಿ) ಕೊರಗಿನಿಂದ ಪ್ರಾಣ ಬಿಟ್ಟರು.

  ಇಂತಹ ಹಿರಿಯರ ಜೀವನಗಳು ಹೇಗಿರುತ್ತವೆ ಅಂದರೆ - ನಮ್ಮಂತಹವರ ಸಹಾಯಕ್ಕೆಲ್ಲ ಯಾರು ಬರುತ್ತಾರೆ? ಎಲ್ಲಾ ನಮ್ಮ ಕರ್ಮ. ನಾವೇ ಅನುಭವಿಸಬೇಕು ಅಷ್ಟೇ... - ಎಂದು ಸ್ವಯಂಕೃತ ಅಪರಾಧ ಭಾವದಿಂದ ನರಳುತ್ತಾರೆ. ಬಾಯಿ ಸತ್ತವರಂತೆ ಜೀವ ಕೈಯಲ್ಲಿ ಹಿಡಿದು ಜೀವಿಸುವ ಇವರು ನಿಮ್ಮ ಠಾಣೆಗೆ ಬಂದು - ಸರ ಕದ್ದವನು ಸಿಕ್ಕಿದನಾ, ಸಾರ್ ? - ಎಂದು ಕೇಳುವಷ್ಟೂ ಚೈತನ್ಯ ಹೊಂದಿರುವುದಿಲ್ಲ.

  ಆ ಮಹಿಳೆಯಂತೂ ಅದೇ ಕೊರಗಿನಲ್ಲಿ ಪ್ರಾಣ ಬಿಟ್ಟರು ಬಿಡಿ. ಇನ್ನು ಅವರ ಪತಿ ಮಹಾಶಯರು ಇಂದಿಗೂ ಅದೇ ನಿಮ್ಮ ಮನೆಯ ಎಡಭಾಗಕ್ಕೆ ಇರುವ ಮನೆಯಲ್ಲಿ, ಹೆಂಡತಿಯನ್ನೂ ಕಳೆದುಕೊಂಡ ದುಃಖದೊಂದಿಗೆ ಜೀವನ ದೂಡುತ್ತಿದ್ದಾರೆ. ಇಷ್ಟಾಗಿ ತಾವು ಕಂಪ್ಲೇಂಟ್ ಕೊಟ್ಟಿದ್ದ ಅದೇ ಠಾಣೆಯ ಇನ್ಸ್‌ಪೆಕ್ಟರ್ ತಮ್ಮ ಪಕ್ಕದ ಮನೆಯವರಾಗಿ ಬಂದಿದ್ದಾರೆ ಎಂದು ತಿಳಿದಿದ್ದರೂ 2-3 ವರ್ಷದಿಂದ ನಿಮ್ಮ ಮನೆಯ ಹೊಸ್ತಿಲು ತುಳಿದು, ತಮಗಾಗಿರುವ ಅನ್ಯಾಯದ ಬಗ್ಗೆ ಹೇಳಿಕೊಂಡಿಲ್ಲ. ಇದಕ್ಕೆ ಅಡ್ಡವಾಗಿರುವುದು ಅವರ ವಯೋವೃದ್ಧ ಸ್ವಾಭಿಮಾನ. ಇಂದಿಗೂ ದೇಹೀ ಎಂದು ನಿಮ್ಮ ಮನೆಯ ಬಾಗಿಲಿಗೆ ಬರುವ ಅಲೋಚನೆ ಅವರಲ್ಲಿಲ್ಲ ಬಿಡಿ.

  ಆದರೆ ನೀವು chain snacher ಗಳಿಗೆ ಈಗಾಗಲೇ ಮೂರ್ನಾಲ್ಕು ಬಾರಿ ಗುಂಡಿಟ್ಟು ಪಾಠ ಕಲಿಸಿರುವವರು. ಜತೆಗೆ, ಬೀದರಿನ ಇರಾನಿ ತಂಡವನ್ನು ನೀವು ಹಿಡಿದು ತಂದಿರುವುದನ್ನು ನೋಡಿದಾಗ ಮತ್ತು ಆ ವೃದ್ಧ ಯಜಮಾನ ಪಾಡನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸಿದಾಗ ... ಅವರು ಪಡುತ್ತಿರುವ ಯಾತನೆಯನ್ನು ನಿಮ್ಮ ಗಮನಕ್ಕೆ ತರಬೇಕು ಅನ್ನಿಸಿತು. ಅದಕ್ಕೆ ನಮ್ಮ ಅಚ್ಚುಮೆಚ್ಚಿನ ಒನ್ಇಂಡಿಯಾ ಕನ್ನಡ ಓದುಗನಾಗಿ ನಿಮಗೆ ಈ ಪತ್ರ ಬರೆಯುವಂತಾಗಿದೆ. ನಿಮ್ಮಲ್ಲಿ ನನ್ನ ಕೋರಿಕೆ ಇಷ್ಟೆ...

  ಅನ್ಯತಾ ತಪ್ಪು ಭಾವಿಸದೆ ಆ ವೃದ್ಧ ಜೋಡಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಮೂರು ವರ್ಷಗಳ ಹಿಂದೆ ಅವರು ಕಳೆದುಕೊಂಡ ಬೆಲೆ ಬಾಳುವ ಚಿನ್ನದ ಸರವನ್ನು ಅವರಿಗೆ ಮತ್ತೆ ದಕ್ಕುವಂತೆ ಮಾಡುತ್ತೀರಾ? ಹಾಗಾದಲ್ಲಿ ಇಹಲೋಕ ತ್ಯಜಿಸಿರುವ ಆ ವೃದ್ಧ ಮಹಿಳೆಯ ಆತ್ಮಕ್ಕೆ ಕೊಂಚವಾದರೂ ಶಾಂತಿ ಸಿಗಬಹುದು ಎಂಬ ಸದಾಶಯ ನನ್ನದು.

  ನಿಮಗೊಂದು ವಿಷಯ ಇಲ್ಲಿ ಸ್ಪಷ್ಟಪಡಿಸುವೆ ಅವರು ಕೊಟ್ಟಿರುವ ದೂರನ್ನು ನೀವೊಮ್ಮೆ ಪರಿಶೀಲಿಸಿದರೆ ಖಂಡಿತ ಆ ಕುಕೃತ್ಯ ಎಸಗಿರುವುದು ಇದೇ ಇರಾನಿ ಪಾತಕಿಗಳು ಎಂಬುದು ನಿಮಗೂ ಮನದಟ್ಟಾಗುತ್ತದೆ. ಖಡಕ್ ಇನ್ಸ್‌ಪೆಕ್ಟರ್ ಎಂದು ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿರುವ, ಇಷ್ಟರಲ್ಲೇ ACPಗೆ promote ಆಗಲಿರುವ ನೀವು ಆ ವೃದ್ಧರಿಗೆ ನ್ಯಾಯ ಒದಗಿಸುತ್ತೀರಾ, Inspector Umesh Sir. Please ...

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Bangalore police recently (February first week) raided the Bidar Irani colony as the residents of that colony were looting bangaloreans. Now an elderly man from JP nagar wants the looted gold chain from this notorious gang. Can the Jayanagar police inspector SK Umesh help the elder man?

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more