ಜಗನ್ ಕೆಣಕಿದ ಸಿಬಿಐ, ಉದ್ಯಮಿಗಳು ತತ್ತರ

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜಗನ್ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ದೊಡ್ಡ ದೊಡ್ಡ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿಯನ್ನು ಮುಟ್ಟುವ ಮುನ್ನ ರೆಡ್ಡಿ ಆಪ್ತರು, ಉದ್ಯಮಿಗಳ ಅಕ್ರಮಗಳತ್ತ ಸಿಬಿಐ ಕಣ್ಣುಹಾಯಿಸಿದೆ. ಪೆನ್ನಾ ಪ್ರತಾಪ್ ರೆಡ್ಡಿ, ನಿಮ್ಮಗಡ್ಡ ಪ್ರಸಾದ್ ಎಂಬ ಭಾರಿ ಕುಳಗಳ ಜಾತಕವನ್ನು ಸಿಬಿಐ ಬಹುತೇಕ ಸಂಗ್ರಹಿಸಿದೆ.
ಕೆಲವು ಕೋಟಿ ರು ಗಳನ್ನು ಹೂಡಿದ್ದ ಮಾಧವ್ ರಾಮಚಂದ್ರನ್, ಎಕೆ ದಂಡಮುಡಿ ಕೂಡಾ ಸಿಬಿಐ ಹಿಡಿತಕ್ಕ ಸಿಕ್ಕಿಕೊಳ್ಳಬೇಕಿದೆ.
ವಿಚಾರಣೆ ಸಂದರ್ಭದಲ್ಲಿ ಜಗನ್ ಕಂಪನಿಗಳ ಅಡಿಟರ್ ವಿಜಯ್ ಸಾಯಿ ರೆಡ್ಡಿ ಯಾವ ಉದ್ಯಮಿಯ ಹೆಸರನ್ನು ಬಾಯಿ ಬಿಟ್ಟಿಲ್ಲದಿರುವುದು ಸಿಬಿಐಗೆ ತಲೆನೋವಾಗಿದೆ. ಕರ್ನಾಟಕ ಹಾಗೂ ಆಂಧ್ರದಲ್ಲಿ ಭಾರಿ ಬಂಡಾವಳ ಹೂಡಿಕೆ, ಬೇನಾಮಿ ಕಂಪನಿಗಳ ಸಂಪೂರ್ಣ ವಿವರಗಳು ಸಾಯಿರೆಡ್ಡಿಗೆ ಮಾತ್ರ ತಿಳಿದಿದೆ.
ಪೆನ್ನಾ ಹಾಗೂ ವನ್ ಪಿಕ್ ಸಮೂಹ ಸಂಸ್ಥೆಗಳು ಈಗ ಸಾಯಿ ರೆಡ್ಡಿ ಮೇಲೆ ಆಕ್ರೋಶಗೊಂಡಿದೆ. ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ ನಲ್ಲಿ ನಿಮ್ಮಗಡ ಪ್ರಸಾದ್ 20 ಕೋಟಿ, ಪೆನ್ನಾ ಸಿಮೆಂಟ್ 23 ಕೋಟಿ ರು ಹೂಡಿದೆ. ರಘುರಾಮ್ ಸಿಮೆಂಟ್ಸ್ ನಲ್ಲಿ ಇಂಡಿಯಾ ಸಿಮೆಂಟ್ಸ್ 15 ಕೋಟಿ ರು ಹಾಗೂ ದಾಲ್ಮಿಯಾ ಸಿಮೆಂಟ್ಸ್ 50 ಕೋಟಿ ರು ಬಂಡವಾಳ ಹೂಡಿಕೆ ಮಾಡಿದೆ.












Click it and Unblock the Notifications