ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸ್ವಾಗತಕ್ಕೆ ತಳಿರು ತೋರಣ ಕಟ್ಟಿರಿ

By Prasad
|
Google Oneindia Kannada News

Bangalore other cities to be rechristened
ಬೆಂಗಳೂರು, ಫೆ. 25 : ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ 12 ನಗರಗಳ ಮರುನಾಮಕರಣ ಆಗುವ ದಿನ ಇನ್ನೇನು ದೂರವಿಲ್ಲ. ಎಲ್ಲ ಅಡೆತಡೆಗಳೂ ದೂರವಾಗಿ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುವ ಎಲ್ಲ ಊರುಗಳ ಹೆಸರುಗಳು ಕನ್ನಡಮಯವಾಗಲಿವೆ. 6 ಕೋಟಿ ಕನ್ನಡಿಗರ 6 ವರ್ಷಗಳ ಕನಸು ಇನ್ನೊಂದು ತಿಂಗಳಲ್ಲಿ ನನಸಾಗಲಿದೆ.

ಧರಂ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್. ಅನಂತ ಮೂರ್ತಿ ಅವರು ಊರುಗಳ ಹೆಸರುಗಳನ್ನು ಕನ್ನಡೀಕರಣ ಮಾಡಬೇಕೆಂದು ಪ್ರಸ್ತಾವನೆ ಮುಂದಿಟ್ಟಿದ್ದರು. ಇದಕ್ಕೆ ಆಂಗ್ಲ ಪ್ರೇಮಿಗಳು ಮತ್ತು ಕನ್ನಡ ದ್ವೇಷಿಗಳು ಕೊಕ್ಕೆ ಹಾಕಿದ್ದರು ಮತ್ತು ಮುಖ್ಯವಾಗಿ ಸರ್ವೇ ಆಫ್ ಇಂಡಿಯಾದಿಂದ ಅನುಮತಿ ಪಡೆಯಬೇಕಾಗಿತ್ತು.

ಈಗ ಸತತ ಪ್ರಯತ್ನಗಳ ನಂತರ ಭಾರತ ಸರ್ವೇಕ್ಷಣ ಇಲಾಖೆಯಿಂದ ಅನುಮತಿ ಪತ್ರ ದೊರೆತಿದೆ. ಬ್ಯಾಂಗಲೋರ್ ಬೆಂಗಳೂರು ಆಗಬಾರದು ಮತ್ತು ಬೆಲ್ಗಮ್ ಬೆಳಗಾವಿ ಆಗಬಾರದೆಂದು ಹೂಡಲಾಗಿದ್ದ ರಿಟ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಕಸದ ಬುಟ್ಟಿಗೆ ಬಿಸಾಕಿದೆ. ಇನ್ನು ಮತ್ತೇನು ಅಡೆತಡೆಗಳು ಇಲ್ಲವೆಂಬುದನ್ನು ಖಾತರಿಪಡಿಸಿಕೊಂಡು ಹೊಸ ಹೆಸರುಗಳನ್ನು ರಾಜ್ಯ ಸರಕಾರ ಘೋಷಣೆ ಮಾಡಬೇಕಿದೆ.

ಇನ್ನೊಂದು ತಿಂಗಳಲ್ಲಿ ಕರ್ನಾಟಕದ ಜನರು ಕಾತುರದಿಂದ ಕಾಯುತ್ತಿರುವ ಘಳಿಗೆ ಬರಲಿದೆ. ಬಹುಶಃ ಹಿಂದೂಗಳ ಹೊಸ ವರ್ಷ ಯುಗಾದಿ ಹೊತ್ತಿಗೆ ಹೊಸ ಹೆಸರುಗಳು ಕರ್ನಾಟಕದ ಭೂಪಟದಲ್ಲಿ ರಾರಾಜಿಸಲಿವೆ. ಹನ್ನೆರಡು ಊರುಗಳಲ್ಲಿ ಹೊಸ ಮಾವಿನ ಚಿಗುರಿನಿಂದ ಕನ್ನಡಿಗರು ತಳಿರು ತೋರಣ ಕಟ್ಟಬೇಕಿದೆ. ಹಳೆ ಹೆಸರು ಮತ್ತು ಹೊಸ ಹೆಸರುಗಳು ಕೆಳಗಿನಂತಿರಲಿವೆ.

ಹಳೆ ಹೆಸರು ಹೊಸ ಹೆಸರು
Bangalore Bengaluru
Mangalore Mangaluru
Bellary Ballary
Bijapur Vijapur
Belgaum Belagavi
Chikmagalur Chikkamagaluru
Gulbarga Kalburgi
Mysore Mysuru
Hospet
Hosapete
Shimoga Shivamogga
Hubli
Hubballi
Tumkur Tumakuru
English summary
Bangalore and other 11 cities will be rechristened in few days time as Survey of India has given clearance to change the names as we pronouce them in Kannada. It was the dream of Jnanpith awardee Dr. UR Anantha Murthy to use Kannada names instead of English names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X