ಉಪ ಚುನಾವಣೆ ಮತಗಟ್ಟೆ, ನೀತಿ, ನಿಯಮ ವಿವರ

DC MT Reju
ಉಡುಪಿ, ಫೆ.3: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣಾ ಪ್ರಕ್ರಿಯೆಗೆ ರಾಜ್ಯ ಚುನಾವಣಾ ಆಯೋಗ ಫೆ.22 ರಂದು ಅಧಿಕೃತವಾಗಿ ಚಾಲನೆ ನೀಡಿದೆ. ಮುಖ್ಯ ಚುನಾವಣಾಧಿಕಾರಿ ಆರ್ ಸುರಂಜನ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ, ನೀತಿ ಸಂಹಿತೆ, ಚುನಾವಣಾಧಿಕಾರಿಗಳು, ಮತಗಟ್ಟೆ ವಿವರ, ಅಭ್ಯರ್ಥಿಗಳು ಮಾಡಬಹುದಾದ ಖರ್ಚುವೆಚ್ಚ ಮುಂತಾದ ನೀತಿ ನಿಯಮಗಳು ಈ ಅಧಿಸೂಚನೆಯಲ್ಲಿದೆ.

* ಉಡುಪಿ ಜಿಲ್ಲಾಧಿಕಾರಿ ಡಾ.ಎಂ. ಟಿ.ರೇಜು ಚುನಾವಣಾಧಿಕಾರಿ
* ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಿ.ಕೆ. ರಂಗಸ್ವಾಮಿ ಹೆಚ್ಚುವರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
* ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ 8 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.

* ಮಾ.18ರಂದು ಮತದಾನ ನಡೆಯಲಿದೆ. ಫೆ.29ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ.
* ಫೆ.23 ರಿಂದ ಫೆ.29ರವರೆಗೆ ಪ್ರತಿದಿನ ಪೂರ್ವಾಹ್ನ 11 ರಿಂದ ಅಪರಾಹ್ಣ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ

* ಮಾ.1ರಂದು ಮತಪತ್ರಗಳ ಪರಿಶೀಲನೆ ನಡೆಯಲಿದೆ.
* ಮಾ.3 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನ.
* ಮಾ.18ರಂದು ಮತದಾನ ನಡೆಯಲಿದೆ.
* ಮಾ.21ರಂದು ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ನಡೆಯಲಿದೆ ಎಂದು ಡಾ.ರೇಜು ಹೇಳಿದ್ದಾರೆ.

ಮತದಾರರ ಅಂಕಿ ಅಂಶ: ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ವಿಧಾನ ಸಭಾ ಕ್ಷೇತ್ರಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಗೆ ಸೇರಿದೆ.

* ಈಗಿರುವ ದಾಖಲೆಗಳಂತೆ ಒಟ್ಟು 12,45,266 ಮತದಾರರನ್ನು ಈ ಕ್ಷೇತ್ರ ಒಳಗೊಂಡಿದೆ.
* ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳದವರು ಫೆ.23ರವರೆಗೆ ತಮ್ಮ ಹೆಸರನ್ನು ಸೇರಿಸಲು ಅವಕಾಶವನ್ನು ನೀಡಲಾಗಿದೆ.
* ಮತದಾರರ ಅಂತಿಮ ಪಟ್ಟಿಯನ್ನು ಫೆ.29ರಂದು ಪ್ರಕಟಿಸಲಾಗುವುದು
* 1510 ಮತಗಟ್ಟೆ: ಈಗ ಮಾಡಲಾಗಿರುವ ಅಂದಾಜಿನಂತೆ ಒಟ್ಟು 1510 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
* ಉಡುಪಿ ಜಿಲ್ಲೆಯಲ್ಲಿ 649 ಹಾಗೂ ಚಿಕ್ಕಮಗಳೂರು ಜಿಲ್ಲೆ ಯಲ್ಲಿ 861 ಮತಗಟ್ಟೆಗಳಿವೆ.
* ಪ್ರತಿ 1,300 ಮತದಾರರಿಗೆ ಒಂದರಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ

ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ವಿವರ ಹೀಗಿದೆ: ಕುಂದಾಪುರ-178, ಉಡುಪಿ-166, ಕಾಪು-147, ಕಾರ್ಕಳ-158, ಶೃಂಗೇರಿ-248, ಮೂಡಿಗೆರೆ-205, ಚಿಕ್ಕಮಗಳೂರು-199, ತರೀಕೆರೆ-209.

* ಚುನಾವಣಾ ಆಯೋಗದ ನಿರ್ದೇಶನದಲ್ಲಿ ತಿಳಿಸಿದಂತೆ ಈ ಉಪಚುನಾವಣೆಯಲ್ಲೂ ಭಾವಚಿತ್ರವನ್ನೊಳಗೊಂಡ ಮತದಾರರ ಗುರುತು ಚೀಟಿ ಮತದಾನಕ್ಕೆ ಕಡ್ಡಾಯವಾಗಿದೆ.

* ಅಥವಾ ಈಗಾಗಲೇ ಅಂಗೀಕರಿಸಲಾದ 16 ದಾಖಲೆಗಳಲ್ಲಿ ಒಂದನ್ನು ಬಳಸಬಹುದು.

ಭದ್ರತಾ ವ್ಯವಸ್ಥೆ: 2009ರಲ್ಲಿ ಈ ಕ್ಷೇತ್ರದಲ್ಲಿ 1,593 ಮತಗಟ್ಟೆಗಳಿದ್ದು, ಇವುಗಳಲ್ಲಿ 573 ಸಾಮಾನ್ಯ, 759 ಸೂಕ್ಷ್ಮ ಹಾಗೂ 261 ಅತಿಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿತ್ತು. ಈ ಬಾರಿ ಇನ್ನೆರಡು ದಿನಗಳಲ್ಲಿ ಅವುಗಳನ್ನು ವಿಭಾಗೀಕರಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ.ಬೋರಲಿಂಗಯ್ಯ ತಿಳಿಸಿದರು.
* ಮಾ.18ರಂದು 1,500 ಪೊಲೀಸ್ ಸಿಬ್ಬಂದಿ ಹಾಗೂ 6,000 ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ನೀತಿ ಸಂಹಿತೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷ ಗಳು ಹಾಗೂ ಅಭ್ಯರ್ಥಿಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚುನಾವಣಾಧಿ ಕಾರಿ ಡಾ.ರೇಜು ಮನವಿ ಮಾಡಿದ್ದಾರೆ.

ಈ ಬಾರಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣೆಗಾಗಿ ಮಾಡುವ ಖರ್ಚುಗಳ ಮಿತಿಯನ್ನು 25 ಲಕ್ಷ ರೂ. ಗಳಿಂದ 40 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ರೇಜು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+