ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಣ್ಯ ಸಚಿವ ಯೋಗೇಶ್ವರ್ ಮೇಲೆ 14 ಪ್ರಕರಣ

By Mahesh
|
Google Oneindia Kannada News

Minister CP Yogeshwar
ಬೆಂಗಳೂರು, ಫೆ.22: ಮೆಗಾಸಿಟಿ ವಂಚನೆ ಪ್ರಕರಣದಲ್ಲಿ ಅರಣ್ಯ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಸುಮಾರು 14 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

SFIO ವರದಿ ( Serious Fraud Investigation Office) ಆಧಾರದ ಮೇಲೆ 11ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ಧಾಖಲಾಗುವ ನಿರೀಕ್ಷೆಯಿದೆ. ಒಟ್ಟು 6 ಖಾಸಗಿ ಪ್ರಕರಣ ಹಾಗೂ 8 ಕ್ರಿಮಿನಲ್ ಪ್ರಕರಣಗಳು ಇದರಲ್ಲಿ ಸೇರಿದೆ.

ವಕೀಲರ ಹೇಳಿಕೆಯಂತೆ ಗುರುವಾರವೇ (ಫೆ.23) ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿ ಬುಧವಾರ ಮಧ್ಯಾನ್ಹದ ಸುದ್ದಿ ಪ್ರಸಾರದಲ್ಲಿ ಹೇಳಿದೆ.

ಹೆಚ್ಚಿನ ಆಸ್ತಿ ಗಳಿಕೆ, ಸುಳ್ಳು ಪ್ರಮಾಣಪತ್ರ ಸಲ್ಲಿಕೆ, ವಂಚನೆ, ಕಳ್ಳ ಋಜು ಮುಂತಾದ ಆರೋಪ ಹೊತ್ತಿರುವ ಯೋಗೇಶ್ವರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(c) ಅಡಿಯಲ್ಲಿ ಲೋಕಾಯುಕ್ತ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದಕ್ಕೂ ಮುನ್ನ: ರವೀಂದ್ರ ಬೆಳೆಯೂರು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದರು.

ಸಿಪಿ ಯೋಗೇಶ್ವರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರ, ಲೋಕಾಯುಕ್ತ ಸಂಸ್ಥೆ ನೀಡಿರುವ ಆಸ್ತಿ ವಿವರ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಟ್ಯಾಕ್ಸ್ ರಿಟರ್ನ್ಸ್ ಪ್ರತಿ, ಕೇಂದ್ರ ಸರ್ಕಾರ ಕಾರ್ಪೋರೇಟ್ ವ್ಯವಹಾರ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಎಲ್ಲವನ್ನೂ ಲೋಕಾಯುಕ್ತ ಪೊಲೀಸರು ಕಲೆ ಹಾಕಿದ್ದಾರೆ.

English summary
Forest Minister CP Yogeshwar may face 14 cases against him in Mega City Real estate township scam in Chennapatna. About14 cases(6 private and 8 Criminal) likely to be filed against CP Yogeshwar on Feb.23 at 11th ACMM court based on SFIO report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X