ಸುನಿಲ್ vs ಉದಯ್, ಬಿಜೆಪಿ ಟಿಕೆಟ್ ಯಾರಿಗೆ?

Sunil Kumar Karkala
ಕಾರ್ಕಳ ಫೆ.19: ಮುಖ್ಯಮಂತ್ರಿ ಸದಾನಂದ ಗೌಡ ವಿಧಾನಪರಿಷತ್ ಗೆ ಆಯ್ಕೆಯಾದ ನಂತರ ಉಡುಪಿ ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿಯಾಗಿ ಸಿದ್ಧತೆ ನಡೆಸಿದೆ. ಬಿಜೆಪಿಯಲ್ಲಿ ಎರಡು ಹೆಸರುಗಳು ಬಹುತೇಕ ಅಂತಿಮವಾಗಿದ್ದು, ಯಾರಿಗೆ ಟಿಕೆಟ್ ಲಭಿಸಲಿದೆ ಎಂಬ ವಿಷಯ ಕುತೂಹಲಕಾರಿಯಾಗಿದೆ.

ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಅನಧಿಕೃತವಾಗಿ ಆರಂಭವಾಗಿದ್ದ ಅಭ್ಯರ್ಥಿ ಹುಡುಕಾಟ ಈಗ ಅಧಿಕೃತವಾಗಿ ಆರಂಭವಾಗಿದೆ.

ಮೂಲಗಳ ಪ್ರಕಾರ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ವಿ.ಸುನೀಲ್ ಕುಮಾರ್ ಅವರ ಪರ ಸದಾನಂದ ಗೌಡ ಹಾಗೂ ಅನಂತ್ ಬಣ ಬ್ಯಾಟಿಂಗ್ ಆರಂಭಿಸಿದೆ. ಆದರೆ, ಇತ್ತೀಚೆಗೆ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಉದಯ್ ಕುಮಾರ್ ಶೆಟ್ಟಿ ಪರ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಮಾತನಾಡಿದ್ದರು. ಸುನೀಲ್ ಗೆ ಟಿಕೆಟ್ ಸಿಗದಿದ್ದರೆ ಒಂದಷ್ಟು ಬಂಡಾಯ, ಅಸಮಾಧಾನ ಕಟ್ಟಿಟ್ಟ ಬುತ್ತಿ.

ಜಾತಿ ಲೆಕ್ಕಾಚಾರ ಪ್ರಮುಖವಾಗಿರುವುದರಿಂದ ಸೂಕ್ಷ್ಮವಾಗಿ ಪರಿಶೀಲಿಸಿದರೆ ಉದಯ್ ಗಿಂತ ಸುನೀಲ್ ಪರ ಹೆಚ್ಚು ಬೆಂಬಲ ಸಿಗಲಿದೆ. ಎರಡೂ ಜಿಲ್ಲೆ ಪರಿಚಿತನಾಗಿರುವ ಸುನೀಲ್ ಗೆ ಬಿ ಫಾರಂ ಸಿಗಲಿದೆ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ.

ಉಳಿದಂತೆ ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಹೆಸರುಗಳೂ ಈ ರೀತಿ ಇದೆ:
1. ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಸುನಿಲ್ ಕುಮಾರ್.
2. ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ಅಧ್ಯಕ್ಷರಾಗಿರುವ ಪ್ರಾಣೇಶ್
3. ಉಡುಪಿ ಜಿಲ್ಲೆ ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ
4. ಬಂಜಾರ ಹೋಟೆಲ್ ಮಾಲೀಕ ಪ್ರಕಾಶ್ ಶೆಟ್ಟಿ

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಒಕ್ಕಲಿಗ ಹಾಗೂ ಬಿಲ್ಲವ ಸಮುದಾಯ ಮತ ಒಲಿಸಿಕೊಂಡರೆ ಎರಡೂ ಜಿಲ್ಲಯಲ್ಲಿ ಪಾರುಪತ್ಯ ನಡೆಸಬಹುದು ಎಂಬ ಎಣಿಕೆ ಎಲ್ಲಾ ಪಕ್ಷಗಳನ್ನು ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+