ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಯ್ಯ ಶೆಟ್ಟರಿಂದ ಗಂಗಾಜಲ ವಿತರಣೆ ಆರಂಭ

By Srinath
|
Google Oneindia Kannada News

krishnaiah-shetty-distributes-ganga-jala-maha-shivratri
ಬೆಂಗಳೂರು, ಫೆ.19: ಪ್ರತಿವರ್ಷದಂತೆ ಈ ಬಾರಿಯೂ ಮಹಾ ಶಿವರಾತ್ರಿ ಪ್ರಯುಕ್ತ ಶಾಸಕ ಹಾಗೂ ಮುಜರಾಯಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಎನ್‌. ಕೃಷ್ಣಯ್ಯ ಶೆಟ್ಟಿ ಅವರು ರಾಜ್ಯದ 5 ಸಾವಿರ ದೇವಸ್ಥಾನಗಳಿಗೆ 60 ಸಾವಿರ ಲೀಟರ್‌ ಪವಿತ್ರ ಗಂಗಾಜಲ ವಿತರಣೆ ಕಾರ್ಯ ಆರಂಭಿಸಿದ್ದಾರೆ.

ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ಚಾಮರಾಜಪೇಟೆಯ ಬಿ.ಕೆ. ಮರಿಯಪ್ಪ ಹಾಸ್ಟೆಲ್ ಎದುರು ಇರುವ ರಾಮೇಶ್ವರ ದೇವಸ್ಥಾನದಲ್ಲಿ ಪೂರ್ಣಕುಂಭ ಮೇಳದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಸಾಂಕೇತಿಕವಾಗಿ ವಿತರಿಸಿದರು.

ಮುಜರಾಯಿ ವ್ಯಾಪ್ತಿಗೆ ಬರುವ ರಾಜ್ಯದ 3 ಸಾವಿರ ಪುರಾತನ ಶಿವಾಲಯಗಳು ಹಾಗೂ 2 ಸಾವಿರ ಖಾಸಗಿ ದೇವಸ್ಥಾನಗಳಿಗೆ ತಲಾ 10 ರಿಂದ 50 ಲೀಟರ್‌ ಗಂಗಾಜಲ ವಿತರಿಸಲಾಗುವುದು ಎಂದು ಕೃಷ್ಣಯ್ಯ ಶೆಟ್ಟರು ಈ ಸಂದರ್ಭದಲ್ಲಿ ಹೇಳಿದರು.

ಹರಿದ್ವಾರದ ಸಮೀಪ ಬ್ರಹ್ಮಕುಂಡದಿಂದ ಟ್ಯಾಂಕರ್‌ಗಳ ಮೂಲಕ ಈ ಗಂಗಾಜಲ ತರಿಸಲಾಗಿದ್ದು, ಸೋಮವಾರ ನಡೆಯುವ ಮಹಾ ಶಿವರಾತ್ರಿ ಹಬ್ಬದಂದು ಭಕ್ತಾದಿಗಳಿಗೆ ತಲುಪಿಸಲಾಗುವುದು. ಪ್ರತಿ ಜಿಲ್ಲೆಗೆ ಪ್ರತ್ಯೇಕ ವಾಹನಗಳ ಮೂಲಕ ಕ್ಯಾನ್‌ಗಳಲ್ಲಿ ಗಂಗಾಜಲ ರವಾನಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷ್ಣಯ್ಯ ಶೆಟ್ಟಿ ತಿಳಿಸಿದರು.

ಮುಜರಾಯಿ ಇಲಾಖೆ ಸಚಿವನಾಗಿದ್ದಾಗ ವೈಕುಂಠ ಏಕಾದಶಿಗೆ ತಿರುಪತಿ ಲಡ್ಡು ಹಾಗೂ ಮಹಾಶಿವರಾತ್ರಿ ಹಬ್ಬಕ್ಕೆ ಭಕ್ತಾದಿಗಳಿಗೆ ಗಂಗಾಜಲ ವಿತರಿಸುವ ಮೂಲಕ 'ದೇವರ ಸೇವೆ' ಮಾಡುವ ನಿರ್ಧಾರ ಕೈಗೊಂಡಿದ್ದೆ. ಅದರಂತೆ ಸತತ ಮೂರು ವರ್ಷಗಳಿಂದ ಈ ಕೆಲಸ ಮುಂದುವರೆಸಿದ್ದೇನೆ. ಇದರ ಸಂಪೂರ್ಣ ಖರ್ಚು- ವೆಚ್ಚವನ್ನು ತಮ್ಮ ಕುಟುಂಬ ಭರಿಸಲಿದ್ದು, ಮುಜರಾಯಿ ಇಲಾಖೆ ಸಹಕಾರ ನೀಡುತ್ತದೆ ಎಂದು ಹೇಳಿದರು.

English summary
Former BJP Muzrai Minister S N Krishnaiah Setty, who is also the Chairman of the Karnataka State Muzrai Board, has started distributing holy water from the river Ganges, Ganga Jal, at Sri Rameshwara Temple in Chamraj pet, Bangalore on Sunday (Feb19). The CM SAdanada Gowda was present on th occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X