• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟುಬರುತ್ತಾರೆ?

By Prasad
|
ಬೆಂಗಳೂರು, ಫೆ. 18 : "ಓಹೋ ಕಾಶಿಗೆ ಹೋಗ್ತಾ ಇದ್ದೀರಾ? ಹಾಗಾದ್ರೆ ಏನು ಬಿಟ್ಟು ಬರ್ತೀರಾ?" ಕಾಶಿಗೆ ಹೊರಟವರಿಗೆ ಈ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಹಿಂದೂ ಸಂಪ್ರದಾಯದ ಪ್ರಕಾರ, ಕಾಶಿಗೆ ಹೋದವರು ತಾವು ಅತ್ಯಂತ ಪ್ರೀತಿಸುವ ವಸ್ತುವನ್ನು ಬಿಟ್ಟುಬರುವುದು (ತ್ಯಜಿಸುವುದು) ವಾಡಿಕೆ. ಕೆಲವರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ, ಕೆಲವರು ಗಂಗೆಯಲ್ಲಿ ಅರ್ಘ್ಯ ಬಿಟ್ಟಂತೆ ಬಿಟ್ಟುಬಿಡುತ್ತಾರೆ.

ಸಂಪ್ರದಾಯ, ಆಚರಣೆ, ಪದ್ಥತಿಗಳು ಏನೇ ಇರಲಿ. ಈಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೂ ಶಿವರಾತ್ರಿಯಂದು ವಿಶ್ವನಾಥನ ದರ್ಶನ ಪಡೆಯಲೆಂದು ಕಾಶಿಗೆ ಹೋಗುತ್ತಿದ್ದಾರೆ. ಅವರು ಕಾಶಿಯಲ್ಲಿ ಏನು ಬಿಟ್ಟುಬರುತ್ತಾರೆ ಎಂಬುದು ಸದ್ಯಕ್ಕೆ ನಿಗೂಢ. ಅವರು ಏನು ಬಿಟ್ಟುಬರಬಹುದು ಎಂಬ ತುಂಟ ಪ್ರಶ್ನೆಯನ್ನು ಒನ್ಇಂಡಿಯಾ-ಕನ್ನಡ ಸಂಪಾದಕ ಶಾಮ್ ಅವರು ತಮ್ಮ ಫೇಸ್‌ಬಕ್‌ನಲ್ಲಿ ಕೇಳಿದ್ದರು.

ಈ ತುಂಟ ಪ್ರಶ್ನೆಗೆ ಅಷ್ಟೇ ತುಂಟತನದಿಂದ, ಗಾಂಭೀರ್ಯದಿಂದ ಹಲವಾರು ಓದುಗರು ಉತ್ತರ ಬರೆದಿದ್ದಾರೆ. ಕೆಲವರು ಯಡಿಯೂರಪ್ಪನವರು ಬಿಜೆಪಿ ಬಿಡಬೇಕು, ಕುರ್ಚಿ ಬಿಡಬೇಕು, ಸಿಟ್ಟು ಬಿಡಬೇಕು ಎಂಬೆಲ್ಲ ಉತ್ತರ ನೀಡಿದ್ದಾರೆ. ಅಯ್ಯೋ ಅವರು ಅವೆಲ್ಲವನ್ನು ಬಿಡುವುದು ಕನಸಿನ ಮಾತು, ಅವರೇನೂ ಬಿಡುವುದಿಲ್ಲ, ಇತರರು ಬಿಟ್ಟದ್ದನ್ನು ತಮ್ಮ ಜೋಳಿಗೆಯಲ್ಲಿ ತುರುಕಿಕೊಂಡು ಬರುತ್ತಾರೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ಅಂತ ಸಂಪ್ರದಾಯ ವೀರಶೈವದಲ್ಲಿ ಇಲ್ಲವೇ ಇಲ್ಲ ಅಂತ ಹೇಳಿದ್ದಾರೆ.

ಮತ್ತೊಬ್ಬರು, ಯಡಿಯೂರಪ್ಪನವರು ಜೈಲಿಗೆ ಹೋದರೂ ಅಧಿಕಾರ ಬಿಡಲು ಇಚ್ಛಿಸದೆ ಅದರ ಹಿಂದೆ ಬಿದ್ದಿದ್ದಾರೆ. ಮತ್ತೆ ಮುಖ್ಯಮಂತ್ರಿ ಮಾಡಿದರೆ 1 ಕೋಟಿ ರು. ಕೊಡುವುದಾಗಿ ಹರಕೆ ಹೊತ್ತು ತಿರುಗಿ ಬರದಿದ್ದರೆ ಸಾಕು, ಅದೇ ಕನ್ನಡಿಗರ ಪುಣ್ಯ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅಭಿಪ್ರಾಯಗಳು ತಮಾಷೆಯಾಗಿವೆ ಮತ್ತು ಚಿಂತನೀಯವಾಗಿಯೂ ಇವೆ. ಯಡಿಯೂರಪ್ಪನವರು ಕಾಶಿಗೆ ತೆರಳುವ ಮುನ್ನ ಈ ಅನಿಸಿಕೆಗಳತ್ತ ಒಮ್ಮೆ ಕಣ್ಣು ಹಾಯಿಸಲಿ. ಎಲ್ಲ ಅನಿಸಿಕೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. ಹಾಗೆಯೆ, ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟುಬರುತ್ತಾರೆ ಎಂಬುದನ್ನು ಇಲ್ಲಿಯೂ ತಿಳಿಸಿ.

ಮುಗಿಸುವ ಮುನ್ನ : ಮಾತು ತಪ್ಪದ ಮಗ, ವಾಲ್ಮಿಕಿ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ 'ಊರ್ವಶಿ' ಶಾರದಾಗೆ ರಾಷ್ಟ್ರಪ್ರಶಸ್ತಿ ತಂದಿತ್ತ ತೆಲುಗು ಚಿತ್ರ 'ನಿಮಜ್ಜನಂ' ಚಿತ್ರದತ್ತ ಒಮ್ಮೆ ಕಣ್ಣು ಹಾಯಿಸೋಣ. ಹೆಂಡತಿಯ ಪಾತ್ರ ವಹಿಸಿದ್ದ ಶಾರದಾ ಗಂಡ ಪಾತ್ರಧಾರಿ ಚಕ್ರಪಾಣಿಗೆ 'ಕಾಶಿಯಲ್ಲಿ ಏನನ್ನು ಬಿಟ್ಟು ಬರ್ತೀರಿ' ಅಂತ ಮುಗ್ಧ ಪ್ರಶ್ನೆ ಕೇಳುತ್ತಾಳೆ. ಆಗ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡ 'ನಿನ್ನನ್ನೇ' ಅಂತ ತುಂಟತನದಿಂದ ಉತ್ತರಿಸುತ್ತಾನೆ. ಮುಂದೆ ಏನಾಗುತ್ತದೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BS Yeddyurappa will be visiting Kashi to seek the blessings of Lord Vishwanath on the occasion of Shivaratri on February 21, Monday. It is tradition to give up something which you love most in Kashi. So, what will BSY leave in Kashi. Read funniest answers on Facebook.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more