ಯಡ್ಡಿ ಹೆಸರಲ್ಲಿ ಚೆಲುವನಾರಾಯಣನಿಗೆ ಶೋಭಾ ಅರ್ಚನೆ
ಮೇಲುಕೋಟೆ,
ಫೆ. 18 : ಒಂದೆಡೆ ಶಿವರಾತ್ರಿಯಂದು ಶಿವಧ್ಯಾನ ಮಾಡಲೆಂದು ಕಾಶಿಗೆ ತೆರಳುತ್ತಿರುವ ಯಡಿಯೂರಪ್ಪನವರು ಸಾಮಾನು ಸರಂಜಾಮು ಪ್ಯಾಕ್ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಯಡಿಯೂರಪ್ಪನವರ ಒಳಿತಿಗಾಗಿ ಶೋಭಾ ಕರಂದ್ಲಾಜೆ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಚೆಲುವನಾರಾಯಣನಿಗೆ ವಿಶೇಷ ಪೂಜೆ ಸಲ್ಲಿಸಿದರು. id="toptextpromo">ಶನಿವಾರ
ಬೆಳಿಗ್ಗೆಯೇ ಮೇಲೆಕೋಟೆಗೆ ತೆರಳಿದ ಶೋಭಾ ಕರಂದ್ಲಾಜೆ ಅವರು ಯೋಗಾನರಸಿಂಹ ಸ್ವಾಮಿ ಇರುವ ಬೆಟ್ಟವನ್ನು ಬರಿಗಾಲಲ್ಲಿ ಏರಿ ಯಡಿಯೂರಪ್ಪನವರ, ತಮ್ಮ ಮತ್ತು ಕುಟುಂಬದ ಎಲ್ಲ ಸದಸ್ಯರ ಗೋತ್ರ, ಹೆಸರು, ನಕ್ಷತ್ರ, ರಾಶಿ ಹೇಳಿ ವಿಶೇಷ ಅರ್ಚನೆ ಮಾಡಿಸಿದರು. ಅವರ ಜೊತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ಹೆಜ್ಜೆಗೆ ಹೆಜ್ಜೆ ಸೇರಿಸಿದರು. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಹೆಸರಲ್ಲಿ ವಿಶೇಷ ಅರ್ಚನೆ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಶೋಭಾ ಅವರು, ಅದರಲ್ಲಿ ತಪ್ಪೇನಿದೆ. ಯಡಿಯೂರಪ್ಪನವರೇ ನನ್ನ ನಾಯಕರು, ನನಗೆ ಸಚಿವ ಸ್ಥಾನ ಸಿಗಲು ಕೂಡ ಅವರೇ ಕಾರಣ. ವಿಶೇಷ ಪೂಜೆ ಸಲ್ಲಿಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು. ರಥಸಪ್ತಮಿಯಾದ ಹದಿನೈದು ದಿನಗಳೊಳಗೆ ಚೆಲುವನಾರಾಯಣನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಜ್ಯೋತಿಷಿಗಳು ಹೇಳುತ್ತಾರೆ.











Click it and Unblock the Notifications