• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

40000 ವಿದ್ಯಾರ್ಥಿಗಳಿಗೆ ವಾಲ್ಮಾರ್ಟ್ ಗಾಳ

By Mahesh
|
ಬೆಂಗಳೂರು, ಫೆ.18: ರೀಟೈಲ್ ಕ್ಷೇತ್ರಕ್ಕೆ ವಾಲ್ ಮಾರ್ಟ್ ಕಾಲಿಟ್ಟರೆ ಸುಮಾರು 80 ಲಕ್ಷ ಉದ್ಯೋಗವಕಾಶ ಸಿಗಲಿದೆ ಎಂದು ಘೋಷಿಸಲಾಗಿತ್ತು. ಈಗ ವಾಲ್ ಮಾರ್ಟ್ ಸಂಸ್ಥೆ ಭಾರ್ತಿ ಎಂಟರ್ ಪ್ರೈಸಸ್ ಜೊತೆಗೂಡಿ ಸುಮಾರು 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ.

ಭಾರ್ತಿ ವಾಲ್ ಮಾರ್ಟ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಸಂಸ್ಥೆ ಶೇ 50:50 ಅನುಪಾತದಲ್ಲಿ ಆರಂಭಿಸಿರುವ ಈ ಯೋಜನೆಯಲ್ಲಿ 15 ಕ್ಯಾಶ್ ಅಂಡ್ ಕ್ಯಾರಿ ಮಳಿಗೆಗಳು ಸೇರಲಿದೆ ಎಂದು ಸಂಸ್ಥೆ ಮುಖ್ಯ ನಿರ್ವಾಹಕ ರಾಜ್ ಜೈನ್ ಹೇಳಿದ್ದಾರೆ.

50 ಸಾವಿರ ಚದರ ಅಡಿ ವಿಸ್ತೀರ್ಣದ ಮಳಿಗೆಗಳು ಮೊದಲಿಗೆ ಅಮೃತಸರ್, ಜಲಂಧರ್, ಕೋಟಾ, ಲೂಧಿಯಾನಾ, ರಾಯಪುರ, ಗುಂಟೂರು ಹಾಗೂ ವಿಜಯವಾಡದಲ್ಲಿ ಆರಂಭವಾಗಲಿದೆ.

ಈಸಿ ಡೇ, ಈಸಿ ಡೇ ಮಾರುಕಟ್ಟೆ ಎಂಬ ಹೆಸರಿನಲ್ಲಿ ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ 175 ಮಳಿಗೆಗಳು, 70 ಅಂಗಡಿಗಳನ್ನು ಈ ವರ್ಷದಲ್ಲಿ ಆರಂಭಿಸಲಾಗುತ್ತದೆ. ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ಚತ್ತೀಸ್ ಗಢ, ಉತ್ತರ ಪ್ರದೇಶ ಹಾಗೂ ರಾಜಸ್ಥಾನಲ್ಲಿ ಮಳಿಗೆಗಳನ್ನು ತೆರೆಯಲಾಗುತ್ತದೆ.

2016ರ ವೇಳೆಗೆ 50,000 ರೀಟೈಲ್ ವೃತ್ತಿಪರರನ್ನು ತಯಾರಿಸುವುದಾಗಿ ಭಾರ್ತಿ ವಾಲ್ ಮಾರ್ಟ್ ಹೇಳಿಕೊಂಡಿದೆ.

ಬೆಂಗಳೂರು, ನವದೆಹಲಿ ಹಾಗೂ ಅಮೃತಸರ್ ನಲ್ಲಿ ವಿದ್ಯಾರ್ಥಿಗಳ ಆಯ್ಕೆ, ತರಬೇತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬೈ ಸೇರಿದಂತೆ ಇನ್ನೂ 12 ಕಡೆ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದು ಜೈನ್ ಹೇಳಿದ್ದಾರೆ.

ಗ್ರಾಹಕ ಸೇವೆ, ಅಕೌಂಟ್ಸ್ ವಿಭಾಗಕ್ಕೆ ನೇಮಕಗೊಂಡಿರುವ ವಿದ್ಯಾರ್ಥಿಗಳು ತಿಂಗಳಿಗೆ ಕನಿಷ್ಠ 7,500 ರು ಸಂಬಳ ಪಡೆಯುತ್ತಿದ್ದಾರೆ. ಹೈಸ್ಕೂಲ್, ಕಾಲೇಜು ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಸಂಸ್ಥೆಯಲ್ಲಿ ದುಡಿವ ಅನುಭವ ಪಡೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharti Walmart (BW), the 50-50 joint venture (JV) between Bharti Enterprises and US retailer Walmart, is keen to train 40,000 students by 2016 for retail jobs. Bharti Retail (BR), the Bharti Group’s retail chain with 175 outlets, too, plans to add 70 stores this year, mainly in south and west India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more