ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಕೈಲಿದೆ ಡಿಕೆ ಶಿವಕುಮಾರ್ ಅಕ್ರಮಗಳ ಜಾತಕ

By Mahesh
|
Google Oneindia Kannada News

DK Shivakumar
ಬೆಂಗಳೂರು, ಫೆ.16: ಹಳ್ಳಿಯಿಂದ ಡಿಲ್ಲಿವರೆಗೂ ಒಳ್ಳೆ ಕನೆಕ್ಷನ್ ಮಡ್ಗಿರೋ ಡಿಕೆಶಿ ಅವರನ್ನು ಕೆಣಕಿರುವ ರಾಮನಗರ ಯೋಗಿ ಈಗ ಸಿಎಂ ಸದಾನಂದ ಒಟ್ಟಿಗೆ ಭಾರಿ ಚರ್ಚೆ ನಡೆಸುತ್ತಾ ಇದ್ದಾರೆ.

ಇಷ್ಟಕ್ಕೂ ಈ ಪಾಟಿ ಧೈರ್ಯ ಮಾಡಿ ಮಾದರಿ ಅರಣ್ಯ ಸಚಿವರ ರೀತಿಯಲ್ಲಿ ಸಿಪಿ ಯೋಗೇಶ್ವರ್ ಅವರು ಡಿಕೆ ಶಿವಕುಮಾರ್ ಅವರ ಮೇಲೆ ಮಾಡಿರುವ ಆರೋಪಕ್ಕೆ ಪುಷ್ಟ ಕೊಡುವಂಥ ದಾಖಲೆಗಳನ್ನು ಈ ಹಿಂದೆ ತೆಂಗು ಮತ್ತು ನಾರಿನ ಮಹಾ ಮಂಡಲದ ಮಾಜಿ ಅಧ್ಯಕ್ಷ ದುಂತೂರ್ ಶ್ರೀನಿವಾಸ್ ಅವರು ಒದಗಿಸಿದ್ದರು.

ಆರೋಪಗಳ ಸಾರಾಂಶ ಇಲ್ಲಿದೆ: ಅದಿರು ಮಣ್ಣು ಟನ್‌ಗೆ 250 ರುಪಾಯಿಗೆ ತಮ್ಮ ಅಧಿನದ ಸಂಸ್ಥೆಗಳಿಂದ ಖರೀದಿ ಮಾಡಿದ್ದಾರೆ. ಪಿ.ಕೆ.ಎಲ್ ಎಂಬ ಬೇನಾಮಿ ಸಂಸ್ಥೆಯ ಮೂಲಕ ಟನ್ ಒಂದಕ್ಕೆ 1,250 ರು.ನಂತೆ ವಿದೇಶಿ ಕಂಪೆನಿಗಳಿಗೆ ರವಾನಿಸಲಾಗಿದೆ.

ಡಿಕೆಶಿ ಅಕ್ರಮ ಕಂಪನಿಗಳು: ಡಿಕೆಶಿ ಹಾಗೂ ಅವರ ಸಹೋದರರ ಒಡೆತನ ಮತ್ತು ಅವರ ಪಾರ್ಟ್‌ನರ್‌ಶಿಪ್ ಇರುವ ವಿಕ್ಟರಿ ಎಕ್ಸ್‌ಪೋರ್ಟ್ಸ್, ಇಂಡಿಯನ್‌ರಾಕ್ಸ್, ವ್ಯಾಲೀಶ್, ಸುವ್ವಿ ಗ್ರಾನೈಟ್ಸ್, ಸ್ಕಂದ ಎಂಟರ್‌ಪ್ರೈಸಸ್, ಸಾಲ್ ಟ್ರೇಡಿಂಗ್ ಕಂಪೆನಿ, ನೆಟ್‌ಪ್ರಾಜೆಕ್ಟ್ ಸಲ್ಯೂಷನ್, ಎಸ್ ಪ್ರದೀಪ್ ಎಕ್ಸ್‌ಪೋರ್ಟ್ಸ್ ಎಂಬ ಕಂಪೆನಿಗಳಿಗೆ ಎಂ.ಎಂ. ಎಲ್‌ನಿಂದ ಅತೀ ಕಡಿಮೆ ದರದಲ್ಲಿ ಖರೀದಿ ಮಾಡಿ ಸರ್ಕಾರಕ್ಕೆ ರಾಜಧನವನ್ನ ಕಟ್ಟದೇ ಕೋಟ್ಯಾಂತರ ರು ವಂಚನೆ ಮಾಡಲಾಗಿದೆ.

ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಅಕ್ರಮಗಣಿಗಾರಿಕೆಯ ಬಗ್ಗೆ ಚರ್ಚೆ ನಡೆದಿತ್ತು. ಆಗ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆಯವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಅಂದಿನ ಸರ್ಕಾರ ಕೇಳಿಕೊಂಡಿತ್ತು.

ಆದರೆ ಡಿ.ಕೆ.ಶಿವಕುಮಾರ್‌ ಅಕ್ರಮ ಅವ್ಯವಹಾರ ನಡೆಸಿರುವುದು ದಾಖಲೆಗಳಿದ್ದರೂ ಎಲ್ಲಿಯೂ ದೋಷಿಯನ್ನಾಗಿಸಿಲ್ಲ. ಅಲ್ಲದೆ ಲೋಕಾಯುಕ್ತ ಎರಡನೇ ವರದಿಯಲ್ಲೂ ಕೂಡಾ ಕಾಂಗ್ರೆಸ್ಸಿನ ಅನಿಲ್ ಲಾಡ್ ಅವರ ಹೆಸರು ಮಾತ್ರ ಸೇರಿಸಲಾಗಿತ್ತು. ಮಾಜಿ ಸಿಎಂಗಳನ್ನು ಆರೋಪಿಗಳಾಗಿ ಮಾಡಿದರೂ ಡಿಕೆ ಶಿವಕುಮಾರ್ ಅವರು ಮತ್ತೊಮ್ಮೆ ದೋಷಾರೋಪಣ ಪಟ್ಟಿಯಿಂದ ಎಸ್ಕೇಪ್ ಆಗಿದ್ದರು.

ಈಗ ಕಲ್ಲುಕ್ವಾರಿ ಗಣಿಗಾರಿಕೆ ಬಗ್ಗೆ ಅರೋಪಗಳನ್ನು ಮಾಡಿರುವ ಅರಣ್ಯ ಸಚಿವ ಸಿಪಿ ಯೋಗೇಶ್ವರ್ ಅವರು ಎಲ್ಲಾ ದಾಖಲೆಗಳನ್ನು ಹೊತ್ತು ಸಿಎಂ ಅವರಿಗೆ ನೀಡಿದ್ದಾರೆ. ಡಿಕೆಶಿ ವಿರುದ್ಧ ತನಿಖೆಗೆ ಆದೇಶಿಸುವ ಬಗ್ಗೆ ಸದಾನಂದ ಗೌಡರು ಚರ್ಚೆ ಬಳಿಕ ನಿರ್ಧರಿಸಲಿದ್ದಾರೆ.

English summary
Congress leader DK Shivakumar has replied strongly to the allegation made by Minister CP Yogeshwar. Dk Shivakumar said he and his brother are not involved in any illegal mining and illegal transport of Iron ore instead Yogeshwar is involved in all illegal activities. Earlier coconut and coir board D Srinivas in Channapatna produced details report on DK Shivakumar's illegal activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X