ಅಕ್ರಮ ಗಣಿಗಾರಿಕೆ, ಸಿಬಿಐ ತನಿಖೆಗೂ ಸಿದ್ಧ: ಡಿಕೆಶಿ

ಒನ್ ಇಂಡಿಯಾ ಕನ್ನಡಕ್ಕೆ ಡಿಕೆ ಶಿವಕುಮಾರ್ ಅವರು ಕಳಿಸುವ ಸ್ಪಷ್ಟನೆ ಈ ಕೆಳಗಿನಂತಿದೆ:
* ನಾನಾಗಲೀ ನನ್ನ ಸಹೋದರ ಡಿ.ಕೆ. ಸುರೇಶ್ ಆಗಲಿ ಕಾನೂನು ಬಾಹೀರವಾಗಿ ಯಾವುದೇ ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿಲ್ಲ.
* ಸಚಿವ ಯೋಗೇಶ್ವರ್ ಅವರಿಗೆ ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಮಾಡದಂತೆ ನಾನಾಗಲೀ ನನ್ನ ಬೆಂಬಲಿಗರಾಗಲೀ ಯಾವುದೇ ಬೆದರಿಕೆ ಹಾಕಿಲ್ಲ.
* ಬೆದರಿಕೆ ಹಾಕಿದ್ದೇನೆ ಎಂಬ ಸಚಿವರ ಆರೋಪ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾದದ್ದು. ಅವರ ಬಳಿ ಯಾವುದಾದರೂ ದಾಖಲೆಗಳಿದ್ದರೆ ಅಥವಾ ಮಾತುಕತೆ ನಡೆಸಿದ ವಿವರಗಳಿದ್ದರೆ ಅದನ್ನು ಬಹಿರಂಗ ಪಡಿಸಲಿ ಅಥವಾ ಪೊಲೀಸರಿಗೆ ದೂರು ನೀಡಲಿ.
* ನನ್ನ ಕ್ಷೇತ್ರದಲ್ಲಿ ಡಿ.ಕೆ.ಎಸ್. ಛಾರಿಟಬಲ್ ಟ್ರಸ್ಟ್ ಹಲವು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿದ್ದು, ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಪಕ್ಷ ಭೇದವಿಲ್ಲದೆ ಗುರುತಿಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ, ಪಾರದರ್ಶಕತೆಯಿಂದ ಮಾಡುತ್ತಾ ಬಂದಿದೆ.
* ಭ್ರಷ್ಟಾಚಾರದ ಲವಲೇಶ ಆರೋಪವು ಬರದಂತೆ ಟ್ರಸ್ಟ್ ಮಾಡುತ್ತಿರುವ ಕೆಲಸವನ್ನು ನನ್ನ ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ.
* ನಿವೇಶನ ಹಂಚುವ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚನೆ ಎಸಗಿದ ಆರೋಪ ಹೊತ್ತು ಯೋಗೇಶ್ವರ್ ಅವರು ಪೊಲೀಸರಿಂದ ಛಾರ್ಜ ಷೀಟ್ ಹಾಕಿಸಿಕೊಂಡಿದ್ದಾರೆ.
* ಸಚಿವರಾದ ನಂತರ ಜಲ್ಲಿ ಕ್ರಷರ್‌ಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿ ಕ್ರಷರ್ ಮಾಲೀಕರಿಂದ 75 ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಕಾಂಗ್ರೆಸ್ ನಾಯಕ ಸಿ,ಎಂ.ಲಿಂಗಪ್ಪ ಬಹಿರಂಗ ಆರೋಪ ಮಾಡಿದ್ದರು.
* ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ನಾನು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಕ್ಕೆ ಪ್ರತಿಕಾರವಾಗಿ ಶ್ರೀ ಯೋಗೇಶ್ವರ್ ನನ್ನ ವಿರುದ್ದ ಸುಳ್ಳು ಆರೋಪ ಹೊರೆಸಲು ಯತ್ನಿಸುತ್ತಿದ್ದಾರೆ. ಇದರ ಬದಲು ಅವರು ಸ್ವಯಂ ಆರೋಪ ಮುಕ್ತರಾಗಿ ಹೊರಗೆ ಬರಲಿ ಎಂದು ಆಶಿಸುತ್ತೇನೆ.
- ಡಿಕೆ ಶಿವಕುಮಾರ, ಕನಕಪುರ
ಡಿಕೆಶಿ ಅಕ್ರಮದ ಬಗ್ಗೆ ಯೋಗೇಶ್ವರ್ ಒದಗಿಸುವ ದಾಖಲೆಗಳು ಯಾವುದು..? ಮುಂದೆ ಓದಿ...












Click it and Unblock the Notifications