ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಹೆಲಿಕಾಪ್ಟರ್, ಕಾರು ವಾಪಸಿಗೆ ಸಿಬಿಐ ಬ್ರೇಕ್

By Srinath
|
Google Oneindia Kannada News

illegal-mining-reddy-pleads-return-helicopter-cbi-opposes
ಹೈದರಾಬಾದ್, ಫೆ.16: ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರಿಂದ ತಾನು ವಶಪಡಿಸಿಕೊಂಡಿರುವ ಹೆಲಿಕಾಪ್ಟರ್ ರುಕ್ಮಿಣಿಯನ್ನು ವಾಪಸ್ ಕೊಡುವುದಕ್ಕೆ ಸಿಬಿಐ ತಕರಾರು ತೆಗೆದಿದೆ. 'ತುಕ್ಕು ಹಿಡಿದು ಗುಜರಿ ಸೇರುವ ಮುನ್ನ ರುಕ್ಮಿಣಿ ಜತೆಗೆ ರೋಲ್ಸ್ ರಾಯ್ಡ್, ಬಿಎಂಡಬ್ಲ್ಯು ಕಾರುಗಳನ್ನೂ ವಾಪಸ್ ಕೊಡಿಸಿ' ಎಂದು ಸಿಬಿಐ ಕೋರ್ಟಿನಲ್ಲಿ ರೆಡ್ಡಿ ಕಳೆದ ಗುರುವಾರ ಅರ್ಜಿ ಸಲ್ಲಿಸಿದ್ದರು.

'ಹೆಲಿಕಾಪ್ಟರ್, ಐಷಾರಾಮಿ ಕಾರುಗಳನ್ನು ಬಳಸದಿದ್ದರೆ ಅವು ತುಕ್ಕು ಹಿಡಿಯುತ್ತವೆ ಎಂಬ ರೆಡ್ಡಿ ವಾದದಲ್ಲಿ ಹುರುಳಿಲ್ಲ. ಅವುಗಳನ್ನೆಲ್ಲ ಸುಸ್ಥಿತಿಯಲ್ಲಿಡಲಾಗಿದೆ. ಹೆಲಿಕಾಪ್ಟರ್ ಬೆಂಗಳೂರಿನಲ್ಲೂ, ಕಾರುಗಳು ಬಳ್ಳಾರಿಯಲ್ಲಿ ಸುಭದ್ರವಾಗಿವೆ. ರೆಡ್ಡಿಗೆ ಯಾವುದೇ ಆತಂಕ ಬೇಡ' ಎಂದು ಸಿಬಿಐ ನ್ಯಾಯಾಲಯದ ಗಮನ ಸೆಳೆದಿದೆ.

'ಅದಕ್ಕಿಂತ ಮುಖ್ಯವಾಗಿ ಈ ವಾಹನಗಳನ್ನು ವಾಪಾಸು ಮಾಡುತ್ತಿದ್ದಂತೆ ರೆಡ್ಡಿ ಅದನ್ನು ಮಾರಿಬಿಡುವ ಸಾಧ್ಯತೆ ಇದೆ. ಒಂದು ವೇಳೆ ಅವು ಮಾರಾಟಗೊಂಡರೆ ಮುಂದಿನ ವಿಚಾರಣೆ ಹಂತಗಳಲ್ಲಿ ಖರೀದಿದಾರರನ್ನೂ ಮೂರನೇ ಪಾರ್ಟಿಯನ್ನಾಗಿ ಮಾಡಬೇಕಾಗುತ್ತದೆ. ಅದು ರಗಳೆಯಾಗುತ್ತದೆ' ಎಂದು ಸಿಬಿಐ ಬ್ರೇಕ್ ಹಾಕಿದೆ.

ಗಮನಾರ್ಹವೆಂದರೆ 'ಆರ್ಥಿಕ ಭಯೋತ್ಪಾದಕ' ಜನಾರ್ದನ ರೆಡ್ಡಿ ಇವುಗಳನ್ನೆಲ್ಲ ಖರೀಸಿದ್ದು ಅಕ್ರಮ ಗಣಿಗಾರಿಕೆಯಿಂದ ಹರಿದುಬಂದ ಹಣದಿಂದ. ಅಷ್ಟಕ್ಕೂ ಹೆಲಿಕಾಪ್ಟರ್ ಓಬಳಾಪುರಂ ಮೈನಿಂಗ್ ಕಂಪನಿಯ ಹೆಸರಿನಲ್ಲಿರುವುದು. ಇನ್ನು ಒಂದು ಕಾರಂತೂ ಇನ್ನೂ ನೋಂದಣಿಯೂ ಆಗಿಲ್ಲ' ಎಂದು ರೆಡ್ಡಿ ಅರ್ಜಿಯನ್ನು ವಿರೋಧಿಸಿ ಸಿಬಿಐ ವಾದ ಮಂಡಿಸಿದೆ.

ಹೀಗೆ ಅಕ್ರಮ ಗಣಿಗಾರಿಕೆಯಿಂದ ಹರಿದುಬಂದ ಹಣದಿಂದ ಖರೀದಿಸಲಾಗಿದೆ. ತಾನು ದಾಖಲಿಸಿರುವ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದ ಮುಖ್ಯ ವಿಚಾರವೇ ಈ ಹಣ. ಆದ್ದರಿಂದ ಕೇಸು ಮುಗಿಯುವವರೆಗೂ ವಾಹನಗಳನ್ನು ವಾಪಸು ಮಾಡಬಾರದು ಎಂದು ಸಿಬಿಐ ಬಲವಾಗಿ ಸಮರ್ಥಿಸಿಕೊಂಡಿತು. ವಿಚಾರಣೆಯನ್ನು ಫೆ. 22ಕ್ಕೆ ಮುಂದೂಡಲಾಗಿದೆ.

English summary
Mining czar Gali Janardhan Reddy and B V Srinivas Reddy, accused in the illegal mining scam in Bellary, Karnataka have filed a petition urging CBI court to return the seized helicopter Rukmini. But CBI strongly oppose it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X