ಬಾಂಗ್ಲಾದಿಂದ ಭಾರತದ ವೆಬ್ ಸೈಟ್ ಹ್ಯಾಕ್

ಢಾಕಾ, ಫೆ.16: ಬಾಂಗ್ಲಾ ದೇಶ ಮೂಲದ ಹ್ಯಾಕರ್ಸ್ ಗುಂಪೊಂದು ಭಾರತದ ಸುಮಾರು 20,000 ಸಾವಿರಕ್ಕೂ ಅಧಿಕ ವೆಬ್ ತಾಣಗಳ ಅತಿಕ್ರಮಣ ಮಾಡಿರುವುದಾಗಿ ಪ್ರಕಟಿಸಿದೆ.

ಗಡಿ ಭದ್ರತಾ ಪಡೆ(BSF)ವೆಬ್ ಸೈಟ್ ಸೇರಿದಂತೆ ಹಲವು ಪ್ರಮುಖ ವೆಬ್ ತಾಣಗಳನ್ನು ಬಲಿಯಾಗಿದೆ. ಗಡಿ ಭಾಗದಲ್ಲಿ ಬಾಂಗ್ಲಾದೇಶಿಗಳನ್ನು ಭಾರತದ ಯೋಧರ ಕೊಂದ ಕೋಪಕ್ಕೆ ಈ ರೀತಿ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಹ್ಯಾಕರ್ಸ್ ಹೇಳಿದ್ದಾರೆ.

Bangladesh Black HAT Hackers ಎಂಬ ಹೆಸರುಳ್ಳ ಹ್ಯಾಕರ್ಸ್ ಫೇಸ್ ಬುಕ್ ನ ತಮ್ಮ ಫ್ಯಾನ್ಸ್ ಪುಟದಲ್ಲಿ "India hacked our 400 sites in total, we hacked 20,000 sites in total since the war started." ಎಂದು ಹಾಕಿಕೊಂಡಿದ್ದಾರೆ.

ಇತ್ತೀಚೆಗೆ Indian Cyber Army ಎಂಬ ಹ್ಯಾಕರ್ಸ್ ಗಳು ಬಾಂಗ್ಲಾದೇಶದ ಐದು ಸಚಿವಾಲಯಗಳ ವೆಬ್ ತಾಣಗಳ ಮೇಲೆ ದಾಳಿ ನಡೆಸಿದ್ದರು.

ಸುಮಾರು 4 ಸಾವಿರ ಕಿ.ಮೀ ಉದ್ದವಿರು ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್ ಎಫ್ ಯೋಧರು ಅಮಾನವೀಯವಾಗಿ ಬಾಂಗ್ಲಾದೇಶಿಗಳನ್ನು ಕೊಂದಿರುವುದು ಸಹಿಸಾಗುತ್ತಿಲ್ಲ. ಸುಮಾರು 31 ಜನ ಅಮಾಯಕರನ್ನು ಕೊಲ್ಲಲಾಗಿದೆ ಎಂದು ಓಧಿಕರ್ ಎಂಬ ಮಾನವ ಹಕ್ಕುಗಳ ಸಂಘಟನೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+