• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.13ರಿಂದ ಮತ್ತೊಮ್ಮೆ ಲೋಡ್ ಶೆಡ್ಡಿಂಗ್ ಆರಂಭ

By Mahesh
|

ಬೆಂಗಳೂರು, ಫೆ.12:ತಾಂತ್ರಿಕ ಕಾರಣಗಳಿಂದ ಜಿಂದಾಲ್‌ ವಿದ್ಯುತ್ ಘಟಕ ಸ್ಥಗಿತಗೊಂಡಿದ್ದು, ಪೂರೈಕೆ ಕೊರತೆ ಉಂಟಾಗಿದೆ. ಸೋಮವಾರ(ಫೆ.13)ದಿಂದ ರಾಜ್ಯದಲ್ಲಿ ಮತ್ತೆ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳ್ಳಲಿದೆ.

ಆದರೆ, ಬೆಂಗಳೂರಿಗೆ ಲೋಡ್ ಶೆಡ್ಡಿಂಗ್ ಭಯ ಇಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ ಮಣಿವಣ್ಣನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ತೋರಣಗಲ್ ನ ಜಿಂದಾಲ್‌ ಘಟಕ ಪೂರೈಕೆ ಮಾಡುತ್ತಿರುವ 300 ಮೆಗಾವ್ಯಾಟ್ ವಿದ್ಯುತ್ ಸಾಲುತ್ತಿಲ್ಲ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 210 ಮೆ.ವಾ. ಸಾಮರ್ಥ್ಯದ 6ನೇ ಘಟಕ ಶುಕ್ರವಾರದಿಂದ ಸ್ಥಗಿತವಾಗಿದೆ. ಇದರಿಂದಾಗಿ ಸುಮಾರು 500 ಮೆಗಾವಾಟ್ ವಿದ್ಯುತ್ ಕಡಿಮೆಯಾಗಿದೆ.

ಜಿಂದಾಲ್ ಘಟಕ ಪುನರಾರಂಭವಾಗಲು 4-5 ದಿನ ಬೇಕಾಗುತ್ತದೆ. ಕೊರತೆ ಬೀಳುವ ವಿದ್ಯುತ್ ಅನ್ನು ಬೇರೆ ಮೂಲಗಳಿಂದ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಶುಕ್ರವಾರ ಒಟ್ಟು 173 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ತಿಂಗಳಲ್ಲಿ ಬೇಡಿಕೆ ಪ್ರಮಾಣ 180 ದಶಲಕ್ಷ ಯೂನಿಟ್‌ಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ನಿತ್ಯ ಸುಮಾರು 1200 ಮೆಗಾವಾಟ್ ಖರೀದಿ ಮಾಡಲಾಗುತ್ತಿದೆ.

ಪ್ರತಿನಿತ್ಯದ ಬೇಡಿಕೆ ಅಂದಾಜು ಪ್ರಮಾಣ ಗರಿಷ್ಠ 8,000 ಮತ್ತು ಕನಿಷ್ಠ 6,188 ಮೆಗಾವಾಟ್ ಇತ್ತು. ಕೇಂದ್ರದಿಂದ 1,815 ಮೆಗಾವಾಟ್ ವಿದ್ಯುತ್ ಪೂರೈಕೆಯಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ 1,329 ಮೆಗಾವಾಟ್ ಉತ್ಪಾದನೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CM DV Sadananda Gowda assured no load shedding this summer. But failure in 300 MW Jindal power plant at Toranagallu in Bellary may result in unscheduled load shedding in many parts of Karnataka but not in Bangalore. Bescom MD Manivannan said We need about 8,000 MW per day and this is going to affect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more