• search

ಸಿಎಂ ಸ್ಥಾನ ಎಷ್ಟು ಕಾಲ, ಯಾವನಿಗೊತ್ತು?: ಡಿವಿಎಸ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  DV Sadananda gowda
  ಬೆಂಗಳೂರು, ಫೆ.10: ಯಾಕೋ ಸಿಎಂ ಸದಾನಂದ ಗೌಡರು ವೇದಾಂತಿಯಂತೆ ಮಾತನಾಡುತ್ತಿದ್ದರು. ಇತ್ತೀಚೆಗೆ 'ನಾನೇ ಬಜೆಟ್ ಮಂಡಿಸುತ್ತೇನೆ..ಸಂಶಯಬೇಡ' ಎಂದು ಘೋಷಿಸಿದ್ದ ಸದಾ ನಗುವ ಗೌಡರು ಯಾಕೋ ಸಪ್ಪಗಾಗಿದ್ದರು.

  ಗುರುವಾರ(ಫೆ.9) ವಿಧಾನ ಪರಿಷತ್ತಿನ ಸಹದ್ಯೋಗಿಗಳು ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾನಂದ ಗೌಡ, 'ನಾನು ಎಷ್ಟು ಕಾಲ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತೇನೋ ಗೊತ್ತಿಲ್ಲ. ಆದರೆ, ಇರುವಷ್ಟು ಕಾಲ ಜನರು ದುಃಖ ಮರೆತು ನಲಿಯುವಂತೆ ಮಾಡುತ್ತೇನೆ' ಎಂದರು.

  ಪರಿಷತ್ತಿ ಎಲ್ಲಾ ಪಕ್ಷದ ಸದಸ್ಯರು ಸದಾನಂದ ಗೌಡರ ಮಾತಿಗೆ ತಲೆದೂಗಿ, ನೀವೆ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ ಎಂದು ಹಾರೈಸಿದರು.

  'ಪ್ರತಿಕ್ಷಣ ಸಂಕಷ್ಟಗಳು ಎದುರಾಗುತ್ತಿದೆ. ಆದರೆ, ಅದನ್ನು ಅವಕಾಶ ರೂಪದಲ್ಲಿ ಬಳಸಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿರುವವರ ಮೇಲೆ ಕನಿಕರವಿದೆ. ಇತೀಚಿನ ರಾಜಕೀಯ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದೆ' ಎಂದು ಸದಾನಂದ ಹೇಳಿದರು.

  ನಾನು ಸಿಎಂ ಹುದ್ದೆಗಾಗಿ ಆಸೆ ಪಟ್ಟವನಲ್ಲ. ತಾನಾಗಿ ಒದಗಿ ಬಂದದ್ದು ನನ್ನ ಸುಕೃತ. ನಾನು ಪಟ್ಟ ಉಳಿಸಿಕೊಳ್ಳಲು ಲಾಬಿ ಮಾಡುವ ಪೈಕಿಯಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಚುಚ್ಚಿದರು.

  ಜನ ಸಾಮಾನ್ಯರ ದೈನಂದಿನ ಬದುಕನ್ನು ಹಸನುಗೊಳಿಸುವುದು ನನ್ನ ಮುಖ್ಯ ಆದ್ಯತೆ ಎಂದು ಸಿಎಂ ಸದಾನಂದ ಸ್ಪಷ್ಟಪಡಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Chief Minister DV Sadananda Gowda was in philosophical mood, he said he was not aware how long he will be in the post but promised to live up to public expectations. On Thursday(Feb.10) employees of the Legislative Council secretariat felicitated him.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more