ನನ್ನ ಹೆಲಿಕಾಪ್ಟರ್ ನನಗೆ ವಾಪಸ್ ಕೊಡಿ: ರೆಡ್ಡಿ
ಹೈದರಾಬಾದ್,
ಫೆ.10: ತಮ್ಮ ಪ್ರೀತಿಯ ರುಕ್ಮಿಣಿ ಬಗ್ಗೆ ಜನಾರ್ದನ ರೆಡ್ಡಿಗೆ ಮೋಹ ಉಕ್ಕಿ ಬಂದಿದೆ ಎನಿಸುತ್ತದೆ. ಹೀಗಾಗಿ, ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ವಶಪಡಿಸಿಕೊಂಡಿರುವ ನನ್ನ ಹೆಲಿಕಾಪ್ಟರ್ ರುಕ್ಮಿಣಿಯನ್ನು ವಾಪಸ್ ಬಿಡಿಸಿ ಕೊಡಿ ಎಂದು 'ಆರ್ಥಿಕ ಭಯೋತ್ಪಾದಕ' ಜನಾರ್ದನ ರೆಡ್ಡಿ ಸಿಬಿಐ ಕೋರ್ಟಿಗೆ ಅಲವತ್ತುಕೊಂಡಿದ್ದಾರೆ. id="toptextpromo">ತುಕ್ಕು
ಹಿಡಿದು ಗುಜರಿ ಸೇರುವ ಮುನ್ನ ರುಕ್ಮಿಣಿ ಜತೆಗೆ ರೋಲ್ಸ್ ರಾಯ್ಡ್, ಬಿಎಂಡಬ್ಲ್ಯು ಕಾರುಗಳನ್ನೂ ವಾಪಸ್ ಕೊಡಿಸಿ ಬುದ್ದಿ. ತನಿಖೆ ಪೂರ್ಣಗೊಂಡು, ಯಾವುದೇ ಘಳಿಗೆಯಲ್ಲಿ ವಾಪಸ್ ಕೇಳಿದರೂ ಕೋರ್ಟಿಗೆ ಒಪ್ಪಿಸುತ್ತೇವೆ ಎಂದು ಕೋರ್ಟಿನಲ್ಲಿ ಜನಾರ್ದನ ರೆಡ್ಡಿ ಮತ್ತು ಅವರ ಭಾವ ಶ್ರೀನಿವಾಸ ರೆಡ್ಡಿ ಅರ್ಜಿ ಗುಜರಾಯಿಸಿದ್ದಾರೆ. ಅರ್ಜಿ ವಿಚಾರಣೆ ಬರುವ ಸೋಮವಾರ (ಫೆ.13) ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಅವುಗಳನ್ನು
ಬಳಸದೇ ಹಾಗೆಯೇ ಬಿಟ್ಟುಬಿಟ್ಟರೆ ಹಾಳಾಗಿಬಿಡುತ್ತವೆ. ಜತೆಗೆ, 2006ರಲ್ಲಿ 2 ಕೋಟಿ ರು. ಮೊದಲ ಕಂತು ಪಾವತಿಸಿ, ಕಂತಿನ ಆಧಾರದಲ್ಲಿ ಹೆಲಿಕಾಪ್ಟರ್ ಖರೀದಿಸಿದ್ದೇವೆ. 10.31 ಲಕ್ಷ ರು. ಮಾಸಿಕ ಕಂತು ತುಂಬುತ್ತಿದ್ದೇವೆ. ಜತೆಗೆ ಬೆಂಗಳೂರಿನಲ್ಲಿ ಅದನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಗೆ 75,000 ರು. ಬಾಡಿಗೆ ಕಟ್ಟುತ್ತಿದ್ದೇವೆ ಎಂದು ಅವರು ಕೋರ್ಟ್ ಗಮನ ಸೆಳೆದಿದ್ದಾರೆ.











Click it and Unblock the Notifications