ಹಳ್ಳಕ್ಕೆ ಬಿದ್ದ ಮ್ಯಾಕ್ಸಿಕ್ಯಾಬ್, 10 ಮಂದಿ ದುರ್ಮರಣ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸವೇಶ್ವರ ಸ್ವಾಮಿ ದೇಗುಲದ ಬೆಟ್ಟಕ್ಕೆ ಹೋಗಿದ್ದ ಕುಟುಂಬದವರು ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ.
ಬೆಟ್ಟದಿಂದ ವಾಹನ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಕಮರಿಗೆ ಬಿದ್ದಿದೆ. 10 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 6 ಜನ ಮಹಿಳೆಯರು ಮೂರು ತಿಂಗಳಿನ ಮಗು ಸೇರಿದೆ.
ಸುಮಾರು 14 ಜನ ಗಾಯಗೊಂಡಿದ್ದಾರೆ. ಮೂವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ ಪಿ ಕೌಶಲೇಂದ್ರ ಕುಮಾರ್ ಹೇಳಿದ್ದಾರೆ.












Click it and Unblock the Notifications