13,000 ಅಶ್ಲೀಲ ತಾಣಗಳ ಕದ ಮುಚ್ಚಿದ ಪಾಕಿಸ್ತಾನ

Pakistan blocks obscene websites
ಇಸ್ಲಾಮಾಬಾದ್, ಫೆ.10: ಸುಮಾರು 13,000ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಪಾಕಿಸ್ತಾನದ ಐಟಿ ಇಲಾಖೆ ಅಶ್ಲೀಲ ತಾಣ ಎಂದು ಪರಿಗಣಿಸಿದೆ. ಅಷ್ಟೂ ವೆಬ್ ತಾಣಗಳ ಕದ ಮುಚ್ಚಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಶ್ಲೀಲ ವೆಬ್ ತಾಣಗಳ ಬಗ್ಗೆ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ. ಅಶ್ಲೀಲ ಸಂದೇಶ ರವಾನೆ, ಎಂಎಂಎಸ್ ಕೂಡಾ ನಿರ್ಬಂಧ ಪಟ್ಟಿಗೆ ಸೇರಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ನವಾಬ್ ಲಿಯಾಗತ್ ಅಲಿ ಖಾನ್ ಹೇಳಿದ್ದಾರೆ.

ಭಾರತ ಹಾಗೂ ಚೀನಾ ದೇಶಗಳಲ್ಲಿ ಅಳವಡಿಸಲಾಗಿರುವ ಸ್ವಯಂ ಚಾಲಿತ ಫಿಲ್ಟರ್ ವ್ಯವಸ್ಥೆ ನಮ್ಮಲ್ಲಿ ಅಳವಡಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಸದ್ಯಕ್ಕೆ ದೂರು ಆಧಾರದ ಮೇಲೆ ವೆಬ್ ತಾಣಗಳನ್ನು ನಿರ್ಬಂಧಿಸಲಾಗುತ್ತಿದೆ.

ಪಾಕಿಸ್ತಾನದ ಹೊರಗೆ ಸರ್ವರ್ ಹೊಂದಿರುವ ವೆಬ್ ತಾಣಗಳ ನಿಯಂತ್ರಣ ಅಸಾಧ್ಯ. ಪೋರ್ನ್ ಹಾಗೂ ನಕಲು ವೆಬ್ ತಾಣಗಳನ್ನು ನಿಯಂತ್ರಿಸುವ ಕಾರ್ಯಾಚರಣೆ ಚಾಲನೆಯಲ್ಲಿದೆ ಎಂದು ಸಚಿವ ನವಾಬ್ ಹೇಳಿದ್ದಾರೆ.

ಈ ಮುಂಚೆ ಫೇಸ್ ಬುಕ್ ಹಾಗೂ ಯುಟ್ಯೂಬ್ ನಿಷೇಧಿಸಿದ್ದ ಪಾಕಿಸ್ತಾನ ಸರ್ಕಾರ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ನಿಷೇಧ ಹಿಂತೆಗೆದುಕೊಂಡು ಅಶ್ಲೀಲ ಪುಟಗಳನ್ನು ಮಾತ್ರ ನಿಯಂತ್ರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+