ರಾಮದಾಸ್ ಗೆ ವಿಮಾನ ನಿಲ್ದಾಣ ನೆನಪ್ಯಾಕೆ ಬಂತು..?

ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸೇವೆಯನ್ನು ಆರಂಭಿಸಿದ ಮೇಲೆ ಸರ್ಕಾರ ಯಾವುದೇ ಸಹಕಾರ ನೀಡಿರಲಿಲ್ಲ. ಸಾವಿರಾರು ಕೋಟಿ ಸಾಲ ಹೊತ್ತುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆಗೆ ಇಂಧನ ಖರೀದಿಯಲ್ಲಿ ರಾಜ್ಯ ಸರಕಾರ ಸಬ್ಸಿಡಿ ನೀಡಲಿಲ್ಲ. ನಷ್ಟದಲ್ಲಿ ವಿಮಾನ ಹಾರಿಸಲು ಇಚ್ಛೆಪಡದ ಕಿಂಗ್ ಫಿಷರ್ ಸಂಸ್ಥೆ ತನ್ನ ವಿಮಾನ ಯಾನ ಸೇವೆ ಸ್ಥಗಿತಗೊಳಿಸಿತು.
ರಾಮದಾಸ್ ಹೇಳಿಕೆಗೆ ಏನು ಕಾರಣ?: ಮೈಸೂರು ವಿಮಾನ ನಿಲ್ದಾಣ ಕಾರ್ಯರಂಭಕ್ಕೆ ಈಗಾಗಲೇ ಕೋಟ್ಯಾಂತರ ರೂ. ವೆಚ್ಚ ಮಾಡಲಾಗಿದೆ. ಜತೆಗೆ ಯೋಜನೆ ಆರಂಭದಲ್ಲಿ ಉದ್ದೇಶಿಸಿದಂತೆಯೇ ಎರಡನೇ ಹಂತದ ಕಾಮಗಾರಿ ಆರಂಭಿಸಲು ಸರ್ವ ಸಿದ್ಧತೆಯಾಗಿದೆ.
ಎರಡನೇ ಹಂತಕ್ಕೆ ಅಗತ್ಯವಿರುವ ಜಮೀನು ಸ್ವಾದೀನ ಪಡಿಸಿಕೊಳ್ಳುವುದು ಹಾಗೂ ಅಗತ್ಯ ಮೂಲ ಸವಲತ್ತು ಕಲ್ಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಫೆ.8 ರಂದು ಸಿಎಂ ಸದಾನಂದ ಗೌಡರ ಜೊತೆ ಮಾತುಕತೆ ನಡೆಸಲಿರುವ ರಾಮದಾಸ್ ಅವರು ಮುಂದಿನ ಯೋಜನೆಯ ನೀಲನಕ್ಷೆ ಪ್ರಕಟಿಸುವ ನಿರೀಕ್ಷೆಯಿದೆ.
ಕಿಂಗ್ ಫಿಷರ್ ಸದ್ಯಕ್ಕೆ ಮೈಸೂರು ಕಡೆ ಬರುವುದಿಲ್ಲವಾದ್ದರಿಂದ ಇತರೆ ಖಾಸಗಿ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ. ಆದರೆ, ಅದಕ್ಕೂ ಮುನ್ನ ಸ್ಥಳೀಯ ರಿಯಲ್ ಎಸ್ಟೇಟ್ ಬಿಲ್ಡರ್ ಗಳ ಜೊತೆ ಟೇಪು ಹಿಡಿದು ಜಾಗ ಅಳತೆ ಮಾಡುತ್ತಿರುವ ಸರ್ಕಾರದ ಕ್ರಮ ಪ್ರಶ್ನಾರ್ಹವಾಗಿದೆ. ಬಿಲ್ಡರ್ ಗಳ ಒತ್ತಡಕ್ಕೆ ಮಣಿದು, ವಿ ನಿಲ್ದಾಣಕ್ಕೆ ಚಾಲನೆ ನೀಡುವ ಎಲ್ಲ ಪ್ರಯತ್ನಗಳು ನಡೆದಿದೆ.












Click it and Unblock the Notifications