ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ವಿ ನಿಲ್ದಾಣ ರೀ ಓಪನ್: ರಾಮದಾಸ್
ಮೈಸೂರು, ಫೆ.5: ಸುಮಾರು ಒಂದು ವರ್ಷಕಾಲ ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಹಾರಾಡುತ್ತಿದ್ದ ಕಿಂಗ್‌ಫಿಶರ್ ವಿಮಾನ ತನ್ನ ಹಾರಾಟ ನಿಲ್ಲಿಸಿದ ಮೇಲೆ ಮಂಡಕಳ್ಳಿ ವಿಮಾನ ನಿಲ್ದಾಣದ ಬಗ್ಗೆ ಉಸ್ತುವಾರಿ ಸಚಿವ ರಾಮದಾಸ್ ಅವರಿಗೆ ನೆನಪಾಗಿದೆ. ವಿ.ನಿಲ್ದಾಣ ಪುನರಾರಂಭಕ್ಕೆ ಸದ್ಯದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಭರವಸೆ ನೀಡಿದ್ದಾರೆ.
2010ರಲ್ಲಿ ದಸರಾ ಸಂದರ್ಭ ಮೈಸೂರಿಗೆ ವಿಮಾನ ಹಾರಾಟವನ್ನು ಆರಂಭಿಸಲಾಗಿತ್ತು. ಪ್ರತಿ ದಿನ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆಗೆ ಸೇರಿದ ಎಟಿಆರ್-72 ವಿಮಾನ ಮಧ್ಯಾಹ್ನ 12.45ಕ್ಕೆ ಮೈಸೂರು – ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ 1.15ಕ್ಕೆ ಹಿಂತಿರುಗುತ್ತಿತ್ತು.
ಈ ವಿಮಾನಕ್ಕೆ ಶೇ.70ರಷ್ಟು ಮಾತ್ರ ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ. ಇನ್ನು ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆಯ ವಿಮಾನ ಹೊರತುಪಡಿಸಿ ಬೇರೆ ಯಾವುದೇ ವಿಮಾನಯಾನ ಸಂಸ್ಥೆಗಳು ವಿಮಾನ ಸಂಚಾರವನ್ನು ಆರಂಭಿಸಲು ಮುಂದೆ ಬಂದಿಲ್ಲ. ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಉತ್ತೇಜನ ನೀಡಿಲ್ಲ ಎಂದು ವಿಜಯ್ ಮಲ್ಯ ದೂರಿದ್ದರು.
ರಾಮದಾಸ್ ವಿಮಾನ ನಿಲ್ದಾಣ ನೆನಪ್ಯಾಕೆ ಬಂತು..?