ಚಿದಂಬರಂಗೆ ಕ್ಲೀನ್ ಚಿಟ್, ಸಿಬಿಐ ತನಿಖೆ ಇಲ್ಲ
ನವದೆಹಲಿ,
ಫೆ.4: ಕೇಂದ್ರ ಗೃಹ ಸಚಿವ ಪಳನಿಯಪ್ಪನ್ ಚಿದಂಬರಂ ಅವರ ಪರ ಸಿಬಿಐ ಕೋರ್ಟಿನಿಂದ ನಿರೀಕ್ಷಿತ ತೀರ್ಪು ಹೊರಬಿದ್ದಿದೆ. ಚಿದಂಬರಂ ವಿರುದ್ಧ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ತನಿಖೆ ನಡೆಸುವುದು ಬೇಡ ಎಂದು ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನ್ಯಾ ಒಪಿ ಸೈನಿ ಆದೇಶಿಸಿದ್ದಾರೆ. ಇದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಭಾರಿ ಜಯ ಸಿಕ್ಕಂತಾಗಿದೆ. ವನ್ಇಂಡಿಯಾ ಕನ್ನಡ ಬೆಳಗ್ಗೆಯೇ ಇದನ್ನು ಹೇಳಿತ್ತು. id="toptextpromo">ಇದರಿಂದ
ತನ್ನ ಬಾಸ್ ಆಗಿರುವ ಗೃಹ ಸಚಿವ ಚಿದಂಬರಂ ವಿರುದ್ಧವೇ ವಿಚಾರಣೆ ನಡೆಸುವ ಮುಜುಗರದಿಂದ ಸಿಬಿಐ ಬಚಾವಾಗಿದೆ. ಕುತೂಹಲದ ಸಂಗತಿಯೆಂದರೆ ಚಿದಂಬರಂ ವಿರುದ್ಧ ತನಿಖೆ ನಡೆಸುವುದು ಬೇಡ ಎಂದು ಆದೇಶಿಸಿರುವ ಹರಿಯಾಣ ಮೂಲದ ನ್ಯಾಯಮೂರ್ತಿ ಸೈನಿ ಅವರೂ ಗೃಹ ಇಲಾಖೆಯ ಅಧೀನಕ್ಕೆ ಒಳಪಡುವ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ 1981ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದವರು. id='are-slot-1' class='oiad oi-axt oiadv'> id='top-searched-articles'>ಜನತಾ
ಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್ ಸ್ವಾಮಿ ಅವರು ನ್ಯಾ ಸೈನಿ ಎದುರು ಜನವರಿ 21ರಂದು ವಾದ ಮಂಡಿಸುತ್ತಾ, 2ಜಿ ಹಗರಣದಲ್ಲಿ ಚಿದಂಬರಂ ಕೈವಾಡ ಇರುವುದು ಮೇಲ್ನೋಟಕ್ಕೇ ದೃಢಪಟ್ಟಿದೆ ಎಂದಿದ್ದರು. ಜತೆಗೆ, ಸಾಕಷ್ಟು ದಾಖಲೆ ಪತ್ರಗಳನ್ನೂ ಸಾಕ್ಷಿಯಾಗಿ ಒದಗಿಸಿದ್ದರು. ಇದೀಗ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.











Click it and Unblock the Notifications