ಮಾಯಾ ಆಪ್ತನ ಬಳಿ ಇದ್ದಿದ್ದು 200 ಕೋಟಿ ರು ಮಾತ್ರ?

ಸುಮಾರು 80ಕ್ಕೂ ಅಧಿಕ ಐಟಿ ಅಧಿಕಾರಿಗಳು ನೋಯ್ಡಾ, ದೆಹಲಿ, ಮುಂಬೈ ಹಾಗೂ ಪಂಜಾಬ್ ರಾಜ್ಯಗಳ ಸುಮಾರು 18ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮಾಯಾವತಿಯ ಸ್ನೇಹಿತ ಪಾಂಟಿ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಮದ್ಯ ಮಾರಾಟ ದರವನ್ನು ಏರಿಳಿತಗೊಳಿಸಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ. ಇದನ್ನು ಕಂಡು ಎಚ್ಚರಗೊಂಡ ಐಟಿ ಇಲಾಖೆ, ಪಾಂಟಿ ಮೇಲೆ ದಾಳಿಗೆ ಇಳಿಯಿತು.
200 ಕೋಟಿ ರು ಮಾತ್ರವೇ? : ಮಾಯಾವತಿ ಆಪ್ತನಾದ ಪಾಂಟಿ ಅಬಕಾರಿ ಗುತ್ತಿಗೆ ಪಡೆದ ನಂತರ ರಿಯಲ್ ಎಸ್ಟೇಟ್ ದಂಧೆಗೆ ಇಳಿದ, ಶುಗರ್ ಮಿಲ್ಸ್, ಚಲನಚಿತ್ರ ನಿರ್ಮಾಣಕ್ಕೂ ಕೈ ಹಾಕಿದೆ.
ಅನೇಕ ಮಾಲ್ ಗಳು, ಮಲ್ಟಿಪೆಕ್ಸ್ ಗಳನ್ನು ನಿರ್ಮಾಣ ಮಾಡಿದ. ಶುಗರ್ ಮಿಲ್ಸ್ ಗಳಲ್ಲಿ ನಕಲಿ ಟೆಂಡರ್ ನಡೆಸಿ ಅವ್ಯವಹಾರ ನಡೆಸಿದ ಆರೋಪ ಕೂಡಾ ಪಾಂಟಿ ಮೇಲಿದೆ.
ಇದರ ಜೊತೆಗೆ ಯುಎಇಗೆ ಅಕ್ರಮ ಹಣ ರವಾನೆ ಮಾಡಿರುವ ಬಗ್ಗೆ ಕೂಡಾ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಮಾಲ್ ಗಳಲ್ಲಿ 200ಕ್ಕೂ ಅಧಿಕ ಕೋಟಿ ರು ಬಚ್ಚಿಟ್ಟ ಪಾಂಟಿ ಅಸ್ತಿ ಲೆಕ್ಕಾಚಾರದಲ್ಲಿ ಆದಾಯ ತೆರಿಗೆ ಇಲಾಖೆ ತೊಡಗಿದೆ.












Click it and Unblock the Notifications