ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

600 ಕೋಟಿ ಹೂಡಿಕೆ, 13000 ಜನ ನೇಮಕಾತಿ: ಇನ್ಫಿ

By Mahesh
|
Google Oneindia Kannada News

Infosys
ಇಂದೋರ್, ಫೆ.1: ಮಧ್ಯಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿ ಸುಮಾರು 130 ಎಕರೆ ಭೂಮಿ ಪಡೆಯುವಲ್ಲಿ ಯಶಸ್ವಿಯಾದ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಇದೇ ಖುಷಿಯಲ್ಲಿ ಭಾರಿ ಬಂಡವಾಳ ಹೂಡಲು ಮುಂದಾಗಿದೆ.

ಇಂದೋರ್ ನ ಉದ್ದೇಶಿತ ಎಸ್ ಇಜಡ್ ಪ್ರದೇಶದಲ್ಲಿ ಸುಮಾರು 600 ಕೋಟಿ ರು ಬಂಡವಾಳ ಹೂಡಲು ಇನ್ಫೋಸಿಸ್ ಮುಂದಾಗಿದೆ. ಈ ಬಗ್ಗೆ ಮಧ್ಯಪ್ರದೇಶ ಸರ್ಕಾರದೊಡನೆ ಒಪ್ಪಂದಕ್ಕೆ ಇನ್ಫೋಸಿಸ್ ಸಹಿ ಹಾಕಿದೆ.

ಈ ಹೊಸ ಘಟಕ ಆರಂಭದ ಜೊತೆಗೆ ಸುಮಾರು 13,000 ಹೊಸ ನೇಮಕಾತಿ ಅವಕಾಶಗಳನ್ನು ನೀಡುವುದಾಗಿ ಇನ್ಫೋಸಿಸ್ ಪ್ರಕಟಿಸಿದೆ.

ಇನ್ಫೋಸಿಸ್ ಸಂಸ್ಥೆಗೆ 130 ಎಕರೆ ಭೂಮಿಯನ್ನು 33 ವರ್ಷಗಳಿಗೆ ಲೀಸ್ ಆಧಾರದ ಮೇಲೆ ನೀಡಲಾಗಿದೆ. ಇಂದೋರಿನ ಸೂಪರ್ ಕಾರಿಡರ್ ಯೋಜನೆಯಲ್ಲಿ ಇನ್ಫೋಸಿಸ್ ತನ್ನ ಘಟಕವನ್ನು ಹೊಂದಲಿದೆ.

English summary
IT-major Infosys will invest Rs 600 crore in its proposed unit in Indore and has signed an MoU with the Madhya Pradesh government. MP government is providing 130 acre land instead of 100 acres to IT giant Infosys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X