ಫೆ.1 ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?

100 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆ ಮೇ ತಿಂಗಳಿನಲ್ಲಿ Initial Public Offering(ಐಪಿಒ) ಬಿಡುಗಡೆ ಮಾಡುತ್ತದೆ ಎಂಬ ಸುದ್ದಿ ಹಬ್ಬಿದೆ.
ನಿರೀಕ್ಷೆಯಂತೆ ಫೇಸ್ ಬುಕ್ ಐಪಿಒ ಅತಿದೊಡ್ಡ ಪ್ರಮಾಣದ್ದಾಗಿರುತ್ತದೆ. 5 ರಿಂದ 10 ಬಿಲಿಯನ್ ಡಾಲರ್ ನಿಂದ 100 ಬಿಲಿಯನ್ ಡಾಲರ್ ತನಕ ಮೌಲ್ಯ ಏರಿಕೆ ಕಾಣುವ ಸಂಭವವಿದೆ.
ಸುಮಾರು 800 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಪ್ರಸಕ್ತ ವರ್ಷದಲ್ಲಿ 1 ಬಿಲಿಯನ್ ದಾಟುವ ಸಾಧ್ಯತೆಯಿದೆ. 2011ರಲ್ಲಿ ಸುಮಾರು 4 ಬಿಲಿಯನ್ ಡಾಲರ್ ಆದಾಯ ದಾಖಲಿಸಿದ್ದ ಫೇಸ್ ಬುಕ್, 2012ರಲ್ಲಿ ಇನ್ನೂ ಅಧಿಕ ಆದಾಯದ ನಿರೀಕ್ಷೆಯಲ್ಲಿದೆ.
ಮಾರ್ಗನ್ ಸ್ಟ್ಯಾನ್ಲಿ, ಬ್ಯಾಂಕ್ ಆಫ್ ಅಮೆರಿಕ ಮೆರ್ರಿಲ್ ಲಿಂಚ್, ಗೋಲ್ಡ್ ಮನ್ ಸಾಚ್ಸ್, ಜೆಪಿ ಮಾರ್ಗನ್ ಹಾಗೂ ಬರ್ಕಲೇಸ್ ಕ್ಯಾಪಿಟಲ್ ಸಂಸ್ಥೆಗಳು ಫೇಸ್ ಬುಕ್ ನ ಐಪಿಒ ನಿರ್ವಹಿಸುವ ಸಾಧ್ಯತೆಗಳಿದೆ. ಆದರೆ, ಫೇಸ್ ಬುಕ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.












Click it and Unblock the Notifications