ಎಮ್ಮಾರ್ ಟೌನ್‌ಶಿಪ್ ಹಗರಣ ಕಾಂಗ್ರೆಸಿನ ಪಾಪದ ಕೂಸು

ಅಸಲಿಗೆ ಇದು ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಕೆವಿಪಿ ರಾಮಚಂದ್ರ ರಾವ್ ಹಗರಣದ ರೂವಾರಿ. ಇನ್ನು, ಈಗಿನ ವೈಎಸ್ಆರ್ ಕಾಂಗ್ರೆಸ್ ನ ಅಧಿನಾಯಕ ಜಗನ್ ಮೋಹನ್ ರೆಡ್ಡಿ ಸಹ ಈ ಅಕ್ರಮದಲ್ಲಿ ಪರೋಕ್ಷವಾಗಿ ಭಾಗಿ.
2005-2009ರ ನಡುವಣ ಅವಧಿಯಲ್ಲಿ ಈ ಅಕ್ರಮ ನಡೆದಿತ್ತು. ದುಬೈನ ಎಮ್ಮಾರ್ ನಿರ್ಮಾಣ ಸಂಸ್ಥೆ ಟೌನ್‌ಶಿಪ್ ಅಭಿವೃದ್ಧಿಪಡಿಸಿತ್ತು. ಹೈದರಾಬಾದಿನ ಗಚಿಬೌಲಿ ಪ್ರದೇಶದಲ್ಲಿ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (APPIC) ರೈತರಿಂದ 535 ಎಕರೆ ಕಿತ್ತುಕೊಂಡು ಈ ಟೌನ್ ಶಿಪ್ ನಿರ್ಮಾಣವಾಗಿತ್ತು.
ಪ್ರಸ್ತುತ ಸಿಬಿಐಗೆ ಮಾಫಿ ಸಾಕ್ಷಿಯಾಗಲು ಹವಣಿಸುತ್ತಿರುವ ಪ್ರಕರಣದ ಆರೋಪಿ, ದಲ್ಲಾಳಿ ಕೋನೇರು ಪ್ರಸಾದ್ ದಾಖಲೆ ಪತ್ರಗಳ ಮೇಲೆ ಕಡಿಮೆ ಬೆಲೆ ತೋರಿಸಿ, ಭಾರಿ ಮೊತ್ತಕ್ಕೆ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ನಿವೇಶನಗಳನ್ನು ಮಾರಾಟ ಮಾಡಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವುಂಟಾಗಿತ್ತು.
ಆಂಧ್ರ ಹೈಕೋರ್ಟ್ ಕಳೆದ ವರ್ಷ ಆಗಸ್ಟ್ ನಲ್ಲಿ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಕುತೂಹಲದ ಸಂಗತಿಯೆಂದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಮತ್ತು ಟಿಡಿಪಿ ಶಾಸಕರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications