ಆಂಧ್ರ ಐಎಎಸ್ ಆಚಾರ್ಯ ಸೆರೆ:ಜಗನ್ ಗೆ ಭಾರಿ ಹಿನ್ನಡೆ
ಹೈದರಾಬಾದ್,
ಜ.31: ಜಗನ್ ಮೋಹನ್ ರೆಡ್ಡಿ ಭಾಗಿಯಾಗಿದ್ದಾರೆನ್ನಲಾದ ಎಮ್ಮಾರ್ ಟೌನ್‌ಶಿಪ್ ಹಗರಣದ ಸಂಬಂಧ ಆಂಧ್ರ ಪ್ರದೇಶದ ಹಿರಿಯ ಶ್ರೇಣಿ ಐಎಎಸ್ ಅಧಿಕಾರಿಯಾದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿಪಿ ಆಚಾರ್ಯ ಅವರನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸೋಮವಾರ ಬಂಧಿಸಿ, 2 ದಿನಗಳ ಕಾಲ ವಶಕ್ಕೆ ತೆಗೆದುಕೊಂಡಿದೆ. id="toptextpromo">ಒಂದು
ವಾರದ ಹಿಂದೆ ಇದೇ ಪ್ರಕರಣದಲ್ಲಿ ಜಗನ್ ಭಾವಮೈದುನ ಸುನಿಲ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಇದೀಗ ಆಡಳಿತಾತ್ಮಕವಾಗಿ ಎಮ್ಮಾರ್ ಟೌನ್‌ಶಿಪ್ ಹಗರಣದ ರೂವಾರಿಯೆನ್ನಲಾದ ಆಚಾರ್ಯ ಬಂಧನ ಜಗನ್ ಗೆ ಭಾರಿ ಹಿನ್ನಡೆ ತಂದಿದೆ. id='are-slot-1' class='oiad oi-axt oiadv'> id='top-searched-articles'>ವಿಚಾರಣೆಗಾಗಿ
ಸೋಮವಾರ ಬೆಳಗ್ಗೆಯೇ ಆಚಾರ್ಯ ಅವರನ್ನು ಹೈದರಾಬಾದ್‌ಗೆ ಕರೆಯಿಸಿಕೊಂಡಿದ್ದ ಸಿಬಿಐ, ಮಧ್ಯಾಹ್ನದ ವೇಳೆಗೆ ಅವರನ್ನು ವಶಕ್ಕೆ ತೆಗೆದುಕೊಂಡಿತೆಂದು ಮೂಲಗಳು ತಿಳಿಸಿವೆ. ಈ ಟೌನ್‌ಶಿಪ್‌ನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಆಂಧ್ರ ಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ (ಎಪಿಐಐಸಿ) ಮತ್ತು ದುಬೈನ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಾದ ಎಮ್ಮಾರ್ ಜಂಟಿಯಾಗಿ ನಿರ್ಮಿಸಿದ್ದವು. 1983ರ ತಂಡದ ಐಎಎಸ್ ಅಧಿಕಾರಿ ಬಿಪಿ ಆಚಾರ್ಯ ಈ ಯೋಜನೆ ಅನುಷ್ಠಾನ ಸಮಯದಲ್ಲಿ ಎಪಿಐಐಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.











Click it and Unblock the Notifications