ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ: ಘಟಾನುಘಟಿ ಐಎಎಸ್ ಗಳೇ ಜೈಲುಪಾಲು

By Srinath
|
Google Oneindia Kannada News

cbi-on-arrests-spree-tainted-ias-in-andhra-pradesh
ಹೈದರಾಬಾದ್, ಜ.31: ಹೈದರಾಬಾದಿನಲ್ಲಿ ಇತ್ತೀಚೆಗೆ ಸಿಬಿಐ ಘಟಾನುಘಟಿ ಅಧಿಕಾರಿ, ರಾಜಕಾರಣಿಗಳನ್ನೇ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ. ಸೋಮವಾರ ಆಚಾರ್ಯರನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ತಿಂಗಳ ಹಿಂದೆ ಹಿರಿಯ ಶ್ರೇಣಿಯ ಮತ್ತೊಬ್ಬ ಐಎಎಸ್ ಅಧಿಕಾರಿಣಿ ಶ್ರೀಲಕ್ಷ್ಮಿಯನ್ನು ಸಿಬಿಐ ಜೈಲಿಗಟ್ಟಿದೆ.

ಕುತೂಹಲದ ಸಂಗತಿಯೆಂದರೆ ನಿನ್ನೆ ಬಂಧಿತರಾಗಿರುವ ಆಚಾರ್ಯ ಮತ್ತು ಶ್ರೀಲಕ್ಷ್ಮಿ ಅತ್ಯಂತ ಪ್ರತಿಭಾನ್ವಿತ ಅಧಿಕಾರಿಗಳು. ಅವರು ಬಂಧನಕ್ಕೊಳಗಾದ ಪ್ರಕರಣಗಳನ್ನು ಹೊರತುಪಡಿಸಿ, ಬೇರೆ ಯಾವ ಕಳಂಕಗಳೂ ಅವರ ಮೇಲಿಲ್ಲ. ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿಯೂ ಇನ್ನೂ ಇಬ್ಬರು ಹಿರಿಯ ಶ್ರೇಣಿಯ ಅಧಿಕಾರಿಗಳು ಈಗಾಗಲೇ ಸಿಬಿಐ ಅತಿಥಿಗಳಾಗಿದ್ದಾರೆ.

ಇಬ್ಬರೂ ಅತ್ಯುನ್ನತ ಶ್ರೇಣಿಯಲ್ಲಿ ಐಎಎಸ್ ಗೆ ಆಯ್ಕೆಯಾದ ಅಧಿಕಾರಿಗಳು. ಆಚಾರ್ಯರಂತೂ ಗೃಹ ಕಾರ್ಯದರ್ಶಿ ಜವಾಬ್ದಾರಿಯೊಂದಿಗೆ ಕಳೆದ ವಾರವಷ್ಟೇ ಚಂಚಲಗೂಡ ಜೈಲಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಸ್ವತಃ ಅದೇ ಜೈಲಿಗೆ ರವಾನೆಯಾಗಿದ್ದಾರೆ. ಪ್ರಸ್ತುತ ಅವರು ಸಿಬಿಐ ವಶದಲ್ಲಿದ್ದರೂ ರಾತ್ರಿ ಅವರು ಚಂಚಲಗೂಡ ಜೈಲಿನಲ್ಲೇ ಕಳೆಯಬೇಕಾಗಿದೆ.

ಶ್ರೀಲಕ್ಷ್ಮಿ ಸಹ ಕಿರಿಯ ವಯಸ್ಸಿಗೇ ಐಎಎಸ್ ಪಟ್ಟಕ್ಕೇರಿದ ಪ್ರತಿಭಾನ್ವಿತೆ. ಸಿಬಿಐನ ಈ ಕರಾರುವಕ್ಕಾದ ಕಾರ್ಯತತ್ಪರತೆಯ ಹಿಂದೆ ಸಿಬಿಐ ಜಂಟಿ ನಿರ್ದೇಶಕ, ಮೀಡಿಯಾ ಡಾರ್ಲಿಂಗ್ ವಿವಿ ಲಕ್ಷ್ಮಿನಾರಾಯಣ, ಸ್ಪೆಷಲ್ ಎಸ್ಪಿ ಖಾನ್ ಅವರಂತಹ ಅಧಿಕಾರಿಗಳ ತಂಡ ದುಡಿಯುತ್ತಿದೆ.

English summary
The CBI on Jan 30 arrested Andhra Home Secretary B.P. Acharya for alleged corruption in the Emaar-APIIC township case. Thus the Hyderabad CBI lead by JD VV Lakshminarayana is on arrests spree in Andhra. A month Back another IAS Sfreelakshmi was arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X