ನಕ್ಸಲ್ ತಾಣದಲ್ಲಿ ತುರ್ತು ಗರ್ಭನಿರೋಧಕ, ಕಾಂಡೋಮ್

condoms-sachet-in-naxal-areas-in-orissa-koraput
ನವದೆಹಲಿ, ಜ.31: ಮೊನ್ನೆ ಒರಿಸ್ಸಾದ ಕೋರಾಪಟ್ ಜಿಲ್ಲೆಯ ಶಿಖಾಪಲ್ಲಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದಾಗ ಅಲ್ಲಿ ಭಾರಿ ಪ್ರಮಾಣದಲ್ಲಿ ನಿರೋಧ್, ಮಾಲಾಡಿ ಕಾಂಡೋಮ್ ಗಳು ಸಿಕ್ಕಿವೆ.

ನಕ್ಸಲರ ಗುಂಪುಗಳಲ್ಲಿ ಮಹಿಳೆಯರೂ ಇರುವುದರಿಂದ ಇದೇನೂ ಹೊಸ ವಿಷಯವಲ್ಲ. ಆದರೆ ಸರಕಾರಿ ಪ್ರಾಯೋಜಿತ ಗರ್ಭನಿರೋಧಕಗಳು ಹೇಗೆ ಇವರ ಕೈ ಸೇರಿದವು ಎಂಬ ಪ್ರಶ್ನೆ ಕಾಡುತ್ತಿದೆ.

ಮಾವೋವಾದಿಗಳು ಅಡಗಿದ್ದ ಸ್ಥಳದಲ್ಲಿ ಬಂದೂಕುಗಳ ಜತೆಗೆ 50 ಕಾಂಡೋಮ್ ಪೌಚುಗಳು, ಗರ್ಭ ನಿರೋಧಕ ಮಾತ್ರೆಯ 10 ಪ್ಯಾಕೆಟ್ ಸಿಕ್ಕಿವೆ. ಜತೆಗೆ, ತುರ್ತು ಗರ್ಭ ನಿರೋಧಕ ಮಾತ್ರೆಗಳು, ಗರ್ಭ ಧರಿಸುವಿಕೆಯನ್ನು ಖಾತ್ರಿಪಡಿಸುವ ಸಾಧನಗಳು, ಗರ್ಭ ಸ್ರಾವಕ ಕಿಟ್ ಗಳು ಪತ್ತೆಯಾಗಿದ್ದವು. ಈ ಸಾಮಗ್ರಿಗಳು ಈಗ ಪೊಲೀಸ್ ಇಲಾಖೆಯ ಸುಪರ್ದಿಯಲ್ಲಿವೆ.

ಈ ಬೆಳವಣಿಗೆಯ ಕುರಿತು ಕೇಂದ್ರ ಗೃಹಸಚಿವಾಲಯದ ಗಮನ ಸೆಳೆಯಲಾಗಿದೆ. ಅಚ್ಚರಿಯ ವಿಷಯವೆಂದರೆ ನಕ್ಸಲರ ತಾಣದಲ್ಲಿ ಪತ್ತೆಯಾಗಿರುವ ವೈದ್ಯಕೀಯ ಸಾಮಗ್ರಿಗಳು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ವಿತರಿಸುವಂತಹವು. ಇವುಗಳಲ್ಲಿ ನಿರೋಧ್ ಕಾಂಡೋಮ್, ಮಾಲಾ ಡಿ ಗರ್ಭನಿರೋಧಕಗಳೇ ಹೆಚ್ಚಾಗಿ ಕಂಡುಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+