100 ದಿನ ಮೊಬೈಲ್ ನಿಷೇಧ, ಬಳಸಿದರೆ ಶಿಕ್ಷೆ ಖಚಿತ

ಕಿಮ್ ಜಾಂಗ್ II ಅವರ ಸಂಸ್ಮರಣೆ ನೆಪದಲ್ಲಿ ಮೊಬೈಲ್ ಬಳಕೆ ನಿಷೇಧ ಹೇರಲಾಗಿದೆ. ಉತ್ತರ ಕೊರಿಯಾದ ಸಹಜ ಸ್ಥಿತಿಯ ವಿವರ ಮೊಬೈಲ್ ಫೋನ್‌ಗಳ ಮೂಲಕ ಹೊರ ಜಗತ್ತಿಗೆ ತಿಳಿಯ ಬಾರದು ಎಂದು ಈ ಮುಂಚೆ ಕಿಮ್ ಜಾಂಗ್ ಈ ಮೊಬೈಲ್ ಫೋನ್‌ಗಳಿಗೆ ನಿಷೇಧ ಹೇರಿದ್ದರು.
700,000 ಮೊಬೈಲ್ ಫೋನ್ ಬಳಕೆದಾರರು ಈ ನಿಷೇಧದ ಹೊರೆ ಹೊರಬೇಕಾಗುತ್ತದೆ. 3ಜಿ ನೆಟ್ವರ್ಕ್ ಬಂದ ಮೇಲೆ ಸುಮಾರು 125,661 ಗ್ರಾಹಕರನ್ನು ಹೊಂದಿದ್ದೇವೆ ಎಂದು Orascom ಸಂಸ್ಥೆ ಹೇಳಿದೆ.
ಉತ್ತರ ಕೊರಿಯಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ ಲಿಬಿಯಾ ಮತ್ತು ಈಜಿಪ್ಟ್ ದೇಶಗಳಿಗೆ ತಿಳಿಯಬಾರದು ಎಂದು ಈಗಿನ ಆಡಳಿತಗಾರ ಕಿಮ್ ಜಾಂಗ್ ಉದ್ದೇಶ ಎನ್ನಲಾಗಿದೆ.100 ದಿನ ನಂತರವೂ ಕಿಮ್ ಜಾಂಗ್ ನಿಷೇಧ ಮುಂದುವರೆಸಿದರೆ ಅಚ್ಚರಿಯೇನಿಲ್ಲ.












Click it and Unblock the Notifications