ರೆಡ್ಡಿ ಬಂಟ ಅಲಿ, 250 ಕೋಟಿ ರು ಒಡೆಯನಂತೆ!

ಮಾಧ್ಯಮಗಳ ವರದಿಯಂತೆ ರೆಡ್ಡಿ ಬಂಟ ಅಲಿ ಸುಮಾರು 250 ಕೋಟಿ ರು ಗಳ ಒಡೆಯ ಎಂದು ಸಿಬಿಐ ಹೇಳಿದೆ. ಗಾಲಿ ರೆಡ್ಡಿಯ ಸಾರಿಗೆ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಲಿ, ಪ್ರತಿ ಟನ್ನಿಗೆ 2 ರು ನಂತೆ ಹಣ ಕೂಡಾ ಪಡೆಯುತ್ತಿದ್ದ. ರೆಡ್ಡಿಗಳಿಗೆ ಗೊತ್ತಿಲ್ಲದಂತೆ ಈತ ತನ್ನ ಜೋಳಿಗೆಗೆ ಹಣ ತುಂಬಿಸುತ್ತಿದ್ದ ಎಂಬ ಅನುಮಾನ ಕೂಡಾ ಎದ್ದಿದೆ.
ಬಂದರುಗಳಿಗೆ ಅಕ್ರಮವಾಗ ಗಣಿ ಅದಿರನ್ನು ಸಾಗಿಸುವಂತೆ ಮಹತ್ವದ ಪಾತ್ರವಹಿಸಿದ್ದ ಎನ್ನಲಾಗಿದೆ. ಕನಿಷ್ಠವೆಂದರೂ 60 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ. ಲೋಕಾಯುಕ್ತ ವರದಿಯಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ.
ಬೇನಾಮಿ ಕಂಪನಿ ಬ್ರಹ್ಮಿಣಿ ಸ್ಟೀಲ್ಸ್ ನ ಹಿಂದಿನ ರಹಸ್ಯ ಅರಿತಿರುವ ಅಲಿ ಸಿಕ್ಕರೆ, ರೆಡ್ಡಿ ಬಗ್ಗೆ ಎಲ್ಲಾ ಮಾಹಿತಿ ಹೊರಹಾಕಬಹುದು ಎಂದು ಸಿಬಿಐ ತಂಡ ನಿರೀಕ್ಷಿಸಿದೆ.
ರೆಡ್ಡಿ ಬಂಧನ ಸಂದರ್ಭದಲ್ಲಿ ಅಲಿ ಬಗ್ಗೆ ಸಿಬಿಐ ತೋರಿದ ನಿರ್ಲಕ್ಷ್ಯ ಈಗ ಭಾರಿ ಹೊಡೆತ ನೀಡುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲುಕ್ ಔಟ್ ನೋಟಿಸ್ ನೀಡಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 5 ರಂದು ಅಲಿ ಕಣ್ಮರೆಯಾದ ಮೇಲೆ ಅಲಿ ಖಾನ್ ಅವರ ತಂದೆ ಇಕ್ಬಾಲ್ ಅಲಿ ಖಾನ್ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿ ಮಗನನ್ನ ಹುಡುಕಿಕೊಡುವಂತೆ ಕೋರಿದ್ದರು.












Click it and Unblock the Notifications