ಕಾಂಗ್ರೆಸ್ಸಿಂದ ಮೋದಿ ಗುಣಗಾನ, ಇದಪ್ಪಾ ರಾಜಕಾರಣ!

Congress praises Narendra Modi
ಅಹ್ಮದಾಬಾದ್, ಜ. 28 : ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದಂತೆ ಸಾಕಷ್ಟು ಮುಖಭಂಗ ಅನುಭವಿಸಿರುವ ಬಿಜೆಪಿ ನಾಯಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷವೇ ಹಾಡಿ ಹೊಗಳಿರುವುದು ಕಾಂಗ್ರೆಸ್ ಹೈಕಮಾಂಡ್ ಕಣ್ಣು ಕೆಂಪಾಗುವಂತೆ ಮಾಡಿದೆ.

ಗಣರಾಜ್ಯೋತ್ಸವದಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿರುವ ಪ್ರಕಟಣೆಗಳಲ್ಲಿ ನರೇಂದ್ರ ಮೋದಿ ಒಬ್ಬ "ಅದ್ಭುತ ಸಂಘಟನಕಾರ ಮತ್ತು ಚುನಾವಣಾ ತಂತ್ರಗಾರಿಕೆಯಲ್ಲಿ ಅಸಾಮಾನ್ಯ" ಎಂದು ಬರೆಯಲಾಗಿರುವ ಸಂದೇಶಗಳನ್ನು ಪ್ರಕಟಿಸಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸಾಕಷ್ಟು ಮುಜುಗರ ತಂದಿದೆ.

ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ, ದಶಕಗಳಿಂದಲೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಗುಜರಾತ್ ರಾಜ್ಯಕ್ಕೆ ಕೊಡುಗೆ ನೀಡಿರುವ ಹಿಂದಿನ ಮುಖ್ಯಮಂತ್ರಿಗಳನ್ನು ಹಾಡಿಹೊಗಳಲಾಗಿದೆ. ಅದರಲ್ಲಿ ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ಹೆಸರನ್ನೂ ಸೇರಿಸಲಾಗಿದೆ.

"ಮೋದಿ ಅವರು ಗುಜರಾತ್ ಅಭಿವೃದ್ಧಿಗಾಗಿ ಗುಣಮಟ್ಟದ ನಾನಾ ಯೋಜನೆಗಳನ್ನು ಹಮ್ಮಿಕೊಂಡು, ಅವನ್ನು ಸಾಕಾರಗೊಳಿಸಿದ್ದಾರೆ. ಬಯೋಟೆಕ್ನಾಲಜಿಗಾಗಿ ಹೊಸ ಇಲಾಖೆಯನ್ನು ತೆರೆದಿದ್ದು, ನರ್ಮದಾ ಡ್ಯಾಮ್ ಎತ್ತರವನ್ನು ಏರಿಸುವಲ್ಲಿ ಮೋದಿ ಕೊಡುಗೆ ಅಪಾರ" ಎಂದು ಬಿಜೆಬಿಯವರೇ ಅಚ್ಚರಿಪಡುವಂತೆ ಹೊಗಳಲಾಗಿದೆ. ಇದೇ ನಿಜವಾದ ರಾಜಕಾರಣ ಅಲ್ಲವೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+