ಎಸ್ಸೆಂ ಕೃಷ್ಣ ವಿರುದ್ಧ ತನಿಖೆಗೆ ಸುಪ್ರೀಂ ತಡೆಯಾಜ್ಞೆ

ಎಸ್ಸೆಂ ಕೃಷ್ಣ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿರುವುದು ಪೂರ್ವಾಗ್ರಹ ಪೀಡಿತ ಕ್ರಮವಾಗಿದೆ. ಲೋಕಾಯುಕ್ತ ಪೊಲೀಸರು ಇನ್ನೂ ತನಿಖೆಯ ಪೂರ್ಣ ವರದಿ ಸಲ್ಲಿಸಿಲ್ಲ ಎಂದು ಕೃಷ್ಣ ಅವರ ಪರ ವಕೀಲ ಕೆಕೆ ವೇಣುಗೋಪಾಲ್ ಅವರ ವಾದವನ್ನು ಕೋರ್ಟ್ ಪುರಸ್ಕರಿಸಿದೆ.
ಟಿಜೆ ಅಬ್ರಹಾಂ ಅವರ ಪರ ವಕೀಲ ಪ್ರಶಾಂತ್ ಭೂಷಣ್ ಅವರ ವಾದವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಕೃಷ್ಣ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ತನಿಖಾ ವರದಿಯನ್ನು ಫೆ.2ರೊಳಗೆ ಲೋಕಾಯುಕ್ತ ಎಸ್ ಪಿ ಜಗದೀಶ್ ಗೆ ಲೋಕಾಯುಕ್ತ ಕೋರ್ಟಿಗೆ ಸಲ್ಲಿಸಬೇಕಿದೆ.
ಪ್ರಕರಣದ ಇತಿಹಾಸ : ಮಾಜಿ ಮುಖ್ಯ ಮಂತ್ರಿಗಳಾದ ಧರಂ ಸಿಂಗ್ ಹಾಗು ಜೆ.ಡಿ.(ಎಸ್) ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗು ಇತರ 11 ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತ ಪೊಲೀಸರು ಎಫ್.ಐ. ಆರ್ ದಾಖಲಿಸಿದ್ದರು.
ಲೋಕಾಯುಕ್ತ ಪೊಲೀಸರು ಕೈಗೊಳ್ಳಬಹುದಾದ ತನಿಖೆಯ ತಡೆ ಕೋರಿ ಹೈ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ನ ಮೊರೆ ಹೋಗಿದ್ದರು.
ಜನವರಿ 20 ರಂದು ತಮ್ಮ ಮೇಲಿನ ಖಾಸಗಿ ದೂರನ್ನು ವಜಾಗೊಳಿಸುವಂತೆ ಕೋರಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿತ್ತು. ಲೋಕಾಯುಕ್ತರು ತನಿಖೆ ಮುಂದುವರಿಸುವಂತೆ ನೀಡಿದ ಆದೇಶದ ವಿರುದ್ಧ ಎಸ್ ಎಂ ಕೃಷ್ಣ ಅವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
1999 ರಿಂದ 2004 ರ ವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ತಮ್ಮ ಅಧಿಕಾರಾವಧಿಯಲ್ಲಿ ಅರಣ್ಯಕ್ಕೆ ಮೀಸಲಾದ ಭೂಮಿಯನ್ನು ಡಿರಿಸರ್ವ್ ಮಾಡಿ ಅನಧಿಕೃತ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದು ಅವರ ಮೇಲಿರುವ ಆರೋಪ.












Click it and Unblock the Notifications