ಪ್ರೇಮ ವೈಫಲ್ಯ, ನಿರೂಪಕಿ ಆತ್ಮಹತ್ಯೆಗೆ ಶರಣು

Mysore suicide
ಮೈಸೂರು, ಜ.26: ವೃತ್ತಿಜೀವನದಲ್ಲಿ ಸಾಕಷ್ಟು ಹೆಸರು ಮಾಡಬೇಕು ಎಂದು ಆಸೆ ಹೊತ್ತಿದ್ದ ಯುವ ನಿರೂಪಕಿಯೊಬ್ಬಳು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.

ಡಾಕ್ಟರ್ಸ್ ಕಾಲೋನಿ ನಿವಾಸಿ ಸೌಮ್ಯ (22) ಆತ್ಮಹತ್ಯೆಗೆ ನಾನಾ ಕಾರಣಗಳು ಗೋಚರಿಸುತ್ತಿದೆ. ಸೌಮ್ಯ ದಾಂಪತ್ಯ ಜೀವನದಲ್ಲಿ ಸುಖ ಪಡೆಯಲಾಗದೆ, ಗಂಡನನ್ನು ತೊರೆದು ವಿಚ್ಛೇಧನ ಪಡೆದುಕೊಂಡಿದ್ದಳು. ಇದಾದ ಬಳಿಕ ಮತ್ತೊಬ್ಬನ ಜತೆ ಆಫೇರ್ ಇತ್ತು ಎನ್ನಲಾಗಿದೆ.

ಕಳೆದ ಕೆಲ ತಿಂಗಳಿಂದ ಪ್ರೇಮಲೋಕದಲ್ಲಿ ಮುಳುಗಿ ತೇಲುತ್ತಿದ್ದ ಸೌಮ್ಯಳಿಗೆ ಮತ್ತೆ ಮದುವೆಯಾಗುವ ಆಸೆ ಹುಟ್ಟಿತ್ತು. ತನ್ನ ಹೊಸ ಪ್ರೇಮಿಯನ್ನು ಈ ಬಗ್ಗೆ ಕೇಳಿದರೆ, ಆತ ಒಂದೇ ಬಾರಿ ನಿರಾಕರಿಸಿಬಿಟ್ಟಿದ್ದ.

ಪ್ರಜ್ಞಾ ಕಳೆದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟದಲ್ಲಿದ್ದ ಸೌಮ್ಯಳನ್ನು ಜಯಲಕ್ಷ್ಮೀಪುರಂನಲ್ಲಿರುವ ವಿಕ್ರಂಜ್ಯೋತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಲು ಆಕೆ ಪೋಷಕರು ಪ್ರಯತ್ನಪಟ್ಟಿದ್ದು ವಿಫಲವಾಗಿದೆ.

ಸ್ಥಳೀಯ ಕೇಬಲ್ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಸೌಮ್ಯ, ಶುಕ್ರವಾರ ಪ್ರಸಾರವಾಗುತ್ತಿದ್ದ ಆರೋಗ್ಯ ಸಂಬಂಧಿತ ಕಾರ್ಯಕ್ರಮದ ಮೂಲಕ ಜನಪ್ರಿಯವಾಗಿದ್ದಳು.

ಅಲ್ಲದೆ, ಸೌಮ್ಯ, ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲೂ ಸಹ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+