ಮುಜರಾಯಿ ದೇಗುಲಗಳಿಗೆ ಇ ಬುಕ್ಕಿಂಗ್ ವ್ಯವಸ್ಥೆ

ಮುಜರಾಯಿ ಇಲಾಖೆಯ ನೂತನ ವೆಬ್ ತಾಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ ಅವರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೊಠಡಿ ಬುಕ್ಕಿಂಗ್, ಸೇವೆ ಕಾಯ್ದಿರಿಸುವಿಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ವೆಬ್ ತಾಣ ಕಲ್ಪಿಸಲಿದೆ. ವಿವಿಧ ಸೇವಾ ಕಾರ್ಯಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ 60 ಕೋಟಿ ರು.ಗಳನ್ನು ನೀಡಿದೆ ಎಂದು ಹೇಳಿದರು.
ದೇವಾಲಯಗಳು ನೆಮ್ಮದಿ ಕೇಂದ್ರಗಳಾಗಿದೆ, ರೆಸಾರ್ಟ್ ಗಳಂತೆ ಕೇವಲ ಮನರಂಜನಾ ಕೇಂದ್ರಗಳಲ್ಲ. ಶ್ರದ್ಧಾಭಕ್ತಿಯ ಕೇಂದ್ರಗಳಾದ ದೇಗುಲಗಳ ಅಭಿವೃದ್ಧಿ ನಮ್ಮ ಸರ್ಕಾರ ಮೂರುವರೆ ವರ್ಷಗಳಿಂದ ಹೆಚ್ಚಿನ ಒತ್ತು ನೀಡಿದೆ ಎಂದರು.
ಕುಕ್ಕೆ ಸುಬ್ರಮಣ್ಯ ಹಾಗೂ ಮಲೈ ಮಹದೇಶ್ವರ ದೇಗುಲಗಳಲ್ಲಿ ಸಂಪೂರ್ಣ ಸೇವೆಗಳು ಲಭ್ಯವಿದೆ. ಮುಜರಾಯಿ ಇಲಾಖೆ ಆವರಣದಲ್ಲಿ ಬೆಂಗಳೂರು ಒನ್ ಕೇಂದ್ರವನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಜರಾಯಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಾಲೂರು ಕೃಷ್ಣಯ್ಯ ಶೆಟ್ಟಿ ಹೇಳಿದರು.











Click it and Unblock the Notifications