ಭ್ರಷ್ಟ ಹುಚ್ಚುಮಾಸ್ತಿಗೌಡನ ಬೇಟೆಯಾಡಿದ ಲೋಕಾಯುಕ್ತ
ಶ್ರೀನಿವಾಸಪುರ
: ಜ. 24 : ನಾಲ್ಕುವರೆ ಸಾವಿರ ರು. ಲಂಚ ಪಡೆಯುತ್ತಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಇಬ್ಬರು ಭ್ರಷ್ಟ ಸರ್ವೆ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಸೋಮವಾರ ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಅವರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. id="toptextpromo">ಹುಚ್ಚುಮಾಸ್ತಿಗೌಡ
ಹಾಗು ವೆಂಕಟೇಶ್ ಎಂಬಿಬ್ಬ ಸರ್ವೆಯರುಗಳು ಕೋಲಾರ ತಾಲೂಕಿನ ನರಸಾಪುರದ ಗೋಪಿ ಎನ್ನುವರಿಂದ ಲಂಚ ಪಡೆಯುವ ಸಂದರ್ಭದಲ್ಲಿ ಕೋಲಾರದ ಲೋಕಾಯುಕ್ತ ವೃತ್ತ ನಿರೀಕ್ಷಕ ಮಂಜುನಾಥ ಹಾಗು ಲೊಕೇಶ ನಡಸಿದ ಕಾರ್ಯಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾಲೂಕಿನ
ಕಸಬಾ ಹೋಬಳಿ ಮಾಸ್ತೇನಹಳ್ಳಿ ಗ್ರಾಮದ ಸರ್ವೆ ನಂ 2/5 ನಲ್ಲಿನ 27 ಕುಂಟೆ ಜಮೀನಿಗೆ ಸಂಬಂಧಿಸಿದಂತೆ ಮೂರು ಭಾಗದ ಸರ್ವೆ ಸ್ಕೇಚ್ ನೀಡುವ ವಿಷಯದಲ್ಲಿಗೋಪಿಯವರಿಂದ 6 ಸಾವಿರ ಹಣ ಕೇಳಿದ್ದರು. ಇದರಲ್ಲಿ ಮುಂಗಡವಾಗಿ 1.5 ಸಾವಿರ ಪಡೆದಿದ್ದರು. ಉಳಿದ ಹಣವನ್ನು ಕಚೇರಿಯಲ್ಲಿ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.











Click it and Unblock the Notifications